ಮೈಸೂರು

ಮೇ.19 : ಅಂಶಿ ಅವರ ಎರಡು ಕೃತಿಗಳ ಲೋಕಾರ್ಪಣೆ ‘

ಮೈಸೂರು,ಮೇ.15:- ಮೈಸೂರಿನ ಹಿರಿಯ ಪತ್ರಕರ್ತರಾದ ‘ಅಂಶಿ ಪ್ರಸನ್ನ ಕುಮಾರ್ ‘ ಅವರ ಎರಡು ಕೃತಿಗಳು   ಮೇ .19 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಜೆಡಿಎಸ್ ರಾಜ್ಯಾಧ್ಯಕ್ಷರಾದ ಶಾಸಕ ಎಚ್. ವಿಶ್ವನಾಥ್, ಚಿಂತಕ ಡಾ. ಗುಬ್ಬಿಗೂಡು ರಮೇಶ್ ಅವರು ಕೃತಿಗಳ ಕುರಿತು ಮಾತನಾಡುವರು. ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಪುಟ್ಟರಂಗಶೆಟ್ಟಿ  ಸೇರಿದಂತೆ ಮೈಸೂರು ಭಾಗದ ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: