ಪ್ರಮುಖ ಸುದ್ದಿ

ಮಹಾರಾಷ್ಟ್ರದಲ್ಲಿ ನನ್ನ ಮೇಲೆ ಎರಡೇ ಎರಡು ಆರೋಪ ಸಾಬೀತು ಮಾಡಲಿ ನಾನು ರಾಜಕೀಯ ತ್ಯಾಗಮಾಡುತ್ತೇನೆ : ಶಾಸಕ ನಾರಾಯಣಗೌಡ

ರಾಜ್ಯ(ಮಂಡ್ಯ)ಮೇ.15:- ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ನಾರಾಯಣಗೌಡ ಬಿಜೆಪಿಯವರಿಂದ ಹತ್ತು ಕೋಟಿ ಹಣ ಪಡೆದಿದ್ದಾರೆ ಎಂಬ ಕೆ.ಬಿ.ಚಂದ್ರಶೇಖರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ಮಾಜಿ ಶಾಸಕ ಚಂದ್ರಶೇಖರ್ ಏನು ಬಿಜೆಪಿ ಏಜೆಂಟಾ..? ಇವರು ಬಿಜೆಪಿ ಜೊತೆ ಇದ್ದಾರೆ. ಹಾಗಾಗಿ ಇದೆಲ್ಲ ಗೊತ್ತಿದೆ ಅಂತ ಮಾತನಾಡುತ್ತಿದ್ದಾರೆ.  ಯಡಿಯೂರಪ್ಪ ಸರ್ಕಾರ ಇದ್ದಾಗ ಇವರೇ ಬಿಜೆಪಿಗೆ ಸೇರಲು ಹೊರಟಿದ್ರು. ಅದನ್ನು ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆ.ಆರ್. ಪೇಟೆ ಪುರಸಭೆ ಚುನಾವಣೆಯಲ್ಲಿ ಇವರಿಗೆ ಹಿನ್ನಡೆಯಾಗುವ ಭಯದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕೆ.ಆರ್ ಪೇಟೆಯಲ್ಲಿ ಅಕ್ರಮ‌ ಆಸ್ತಿ ಮಾಡಿದ್ದಾರೆ. ಅದರ ವಿರುದ್ಧ ತನಿಖೆಗೆ ನಾನು ಕೋರ್ಟ್ ಮತ್ತು ಸರ್ಕಾರದ ಮೂಲಕ ಒತ್ತಾಯಸಿದ್ದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇತ್ತು. ಹಾಗಾಗಿ ಅದನ್ನು ಮುಚ್ಚಿ ಹಾಕಿದ್ರು.ಈ ಬಾರಿ ಮೈತ್ರಿ ಇದೆ ಎಂದು ಸುಮ್ಮನಾಗಿದ್ದೆ. ಈ ರೀತಿ ಕೆಣಕುತ್ತಿರುವುದರಿಂದ ಅದು ಕೂಡ ಓಪನ್ ಆಗುತ್ತೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಾನು ಮಹಾರಾಷ್ಟ್ರಕ್ಕೆ ಹೋಗ್ತೀನಿ ಅಂತಾರೆ. ನಾನು ಮಹಾರಾಷ್ಟ್ರಕ್ಕೆ ಹೊಟ್ಟೆ ಬಟ್ಟೆಗಾಗಿ ದುಡಿಯಲು ಹೋಗಿದ್ದೆ.  ಇಂದು ಉದ್ಯಮಿ ಆಗಿದ್ದೇನೆ. ಪುನಃ ಜನ್ಮಭೂಮಿಗೆ ಬಂದಿದ್ದೇನೆ. ನಾನು ಮಹಾರಾಷ್ಟ್ರದಲ್ಲಿ ನೂರಾರು ಕೆಟ್ಟ ಕೆಲಸ ಮಾಡಿದ್ದೇನೆ ಅಂತಾರೆ. ಮಹಾರಾಷ್ಟ್ರದಲ್ಲಿ ನನ್ನ ಮೇಲೆ ಎರಡೇ ಎರಡು ಆರೋಪ ಸಾಬೀತು ಮಾಡಲಿ. ನಾನು ರಾಜಕೀಯ ತ್ಯಾಗ ಮಾಡುತ್ತೇನೆ. ಇವರ ಮೇಲಿನ ಆರೋಪಕ್ಕೆ ನಾನು ಸಾಕ್ಷಿ ಕೊಡುತ್ತೇನೆ. ಅವರು ರಾಜಕಾರಣ ಬಿಡುತ್ತಾರಾ? ಇದು ನನ್ನ‌ ಸವಾಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲ್ಮಟ್ಟದಲ್ಲಿ ಮೈತ್ರಿ ಇದ್ದರೂ ನಮ್ಮ ತಾಲೂಕಲ್ಲಿ ಇವರು ಮಾಡಿರುವ ಕರ್ಮ, ಲೂಟಿಯನ್ನು ನಾವು ಒಪ್ಪಲ್ಲ.  ಮೇಲ್ಮಟ್ಟದಲ್ಲಿ ಮೈತ್ರಿ ಒಪ್ಪಿದರೂ, ಸ್ಥಳೀಯವಾಗಿ ಒಪ್ಪಲ್ಲ. ಫಲಿತಾಂಶದ ನಂತರ ಯಾರೂ ಕೆ ಆರ್ ಪೇಟೆ ಬಿಡುತ್ತಾರೆ ಜನ ತೀರ್ಮಾನಿಸುತ್ತಾರೆ. ನಮ್ಮ‌ ತಂದೆ, ತಾಯಿ ನಮಗೆ ಒಳ್ಳೆ ಸಂಸ್ಕಾರ ಕಲಿಸಿದ್ದಾರೆ. ಅವರ ರೀತಿ ನಮ್ಮನ್ನು ಬೆಳೆಸಿಲ್ಲ ಎಂದರು.

ಗಂಡಸ್ಥನ ಇದ್ದರೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ಗೆ   ಸವಾಲು ಹಾಕಿದರು.

ಕೆಬಿ.ಚಂದ್ರಶೇಖರ್ ಅಭ್ಯರ್ಥಿ ನಿಖಿಲ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನೇರವಾಗಿ ಕರೆದಿದ್ರೆ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೆ. ಅವರು ಕರೆಯದ ಕಾರಣ ನಾನು ತಟಸ್ಥವಾಗಿದ್ದೆ ಎಂದು ಹೇಳಿಕೆ ನೀಡಿದ್ದರು   ಕೆ.ಬಿ.ಚಂದ್ರಶೇಖರ್ ಹೇಳಿಕೆಗೆ   ತಿರುಗೇಟು ನೀಡಿದ ಶಾಸಕ ನಾರಾಯಣ ಗೌಡ ಸ್ವತಃ ರೇವಣ್ಣ ಅವರೇ ಬಂದಿದ್ರು.‌ಅವರು ಕುಮಾರಣ್ಣ ಅವರಿಗಿಂತ ಹಿರಿಯರು. ಇವರಿಗೆ ನಿಖಿಲ್ ಪರ ಪ್ರಚಾರ ಮಾಡಲು ಇಷ್ಟ ಇರಲಿಲ್ಲ. ಅದಕ್ಕಾಗಿ ಕಾಂಟ್ರವರ್ಸಿ ಮಾಡಲು ಮಾತನಾಡುತ್ತಾರೆ.  ಇವರು ಸುಮಲತಾ ಪರ ಪ್ರಚಾರ ಮಾಡಿದ್ದನ್ನು ಮಕ್ಕಳ ಸಮೇತ ನೋಡಿದ್ದಾರೆ. ಸುಮಲತಾ ಬರುವ ಹಳ್ಳಿಗಳಿಗೆ ಹೋಗಿ ಸುಮಲತಾ ಬರುತ್ತಿದ್ದಾರೆ ಎಂದು  ಹಣ ಹಂಚಿಕೆ ಮಾಡಿ ಪಟಾಕಿ ಹೊಡೆಸಲು ವ್ಯವಸ್ಥೆ ಮಾಡಿದ್ದಾರೆ. ಧೈರ್ಯ ಇದ್ದರೆ ನೇರವಾಗಿ ಫೇಸ್ ಮಾಡಬೇಕು. ಸುಮ್ಮನೆ ಸುಳ್ಳು ಹೇಳಬಾರದು. ಮಾಡುವುದೊಂದು ಹೇಳುವುದೊಂದು ಮಾಡಿದ್ರೆ ಜನ ನಂಬಲ್ಲ ಎಂದು ಕಿಡಿ ಕಾರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: