ಮನರಂಜನೆ

ಹಳೆ ಲುಕ್ ಗೆ ಮರಳಿದ ನಟ ರಮೇಶ್ ಅರವಿಂದ್

ಬೆಂಗಳೂರು,ಮೇ 15-ನಟ ರಮೇಶ್ ಅರವಿಂದ್ ಯಾವಾಗಲೂ ಗಡ್ಡ ಬಿಟ್ಟಿರಲಿಲ್ಲ. ಆದರೆ ಸಿನಿಮಾಗಾಗಿ ಗಡ್ಡ ಬಿಟ್ಟಿದ್ದರು. ಗಡ್ಡಧಾರಿಯಾಗಿ ರಮೇಶ್ ಅವರನ್ನು ನೋಡಲು ಇಷ್ಟಪಡದ ಅನೇಕರು ನೀವು ಯಾವಾಗ ಗಡ್ಡ ತೆಗೆಯುತ್ತೀರಿ? ಎಂದು ಪ್ರಶ್ನೆ ಕೇಳುತ್ತಿದ್ದರು.

ಇದೀಗ ರಮೇಶ್ ಅವರು ತಮ್ಮ ಗಡ್ಡ ತೆಗೆದಿದ್ದು, ಹಳೆ ಲುಕ್ ಗೆ ಮರಳಿದ್ದಾರೆ. ರಮೇಶ್ ಯಾವಾಗಲೂ ಗಡ್ಡ ಬಿಡುತ್ತಿರಲಿಲ್ಲ. ಶಿವಾಜಿ ಸೂರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಸಿನಿಮಾಗಾಗಿ ಅವರು ಗಡ್ಡ ಬಿಟ್ಟಿದ್ದರು. ಸಿನಿಮಾದಲ್ಲಿ ಡಿಟೆಕ್ವಿವ್ ಪಾತ್ರ ಮಾಡಿದ್ದ ರಮೇಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಆ ಪಾತ್ರದ ಶೂಟಿಂಗ್ ಮುಗಿದ ಕಾರಣ ರಮೇಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹಳೆ ಲುಕ್ ನಲ್ಲಿ ಫುಲ್ ಫ್ರೆಶ್ ಆಗಿ ರಮೇಶ್ ಮರಳಿದ್ದಾರೆ. ಇನ್ನು ರಮೇಶ್ ರನ್ನು ವಿಶೇಷವಾಗಿ ಗುಲಾಬಿ ಹೂಗಳ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲಾಗಿದೆ.

ರಮೇಶ್ ಅವರ ಗಡ್ಡದ ವಿಷಯವನ್ನು ಸಣ್ಣ ವಿಡಿಯೋ ಮೂಲಕ ಜೀ ಕನ್ನಡ ವಾಹಿನಿ ಫನ್ನಿಯಾಗಿ ಹಂಚಿಕೊಂಡಿದೆ. ಈ ವಾರ ನಟ ಶ್ರೀಮುರಳಿ ಸಂಚಿಕೆ ಪ್ರಸಾರ ಆಗಲಿದ್ದು, ಆ ಸಂಚಿಕೆಯಿಂದ ರಮೇಶ್ ಲುಕ್ ಬದಲಾಗಲಿದೆ. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಸಾಕಷ್ಟು ವೀಕ್ಷಕರಿಗೆ ರಮೇಶ್ ಗಡ್ಡ ಇಷ್ಟ ಆಗಿರಲಿಲ್ಲ. (ಎಂ.ಎನ್)

Leave a Reply

comments

Related Articles

error: