ಮೈಸೂರು

ಮೇ 19 : ಒಡಿಸ್ಸಿ, ಭರತನಾಟ್ಯ, ಕಥಕ್, ಕೂಚಿಪುಡಿ ಶಾಸ್ತ್ರೀಯ ನೃತ್ಯ ಪ್ರದರ್ಶನದ ಅನಾವರಣ

ಮೈಸೂರು, ಮೇ 15:- ಮೈಸೂರು ಬಿ.ನಾಗರಾಜ್‍ರವರ ಮಾರ್ಗದರ್ಶನದಲ್ಲಿ ಸಂಯೋಜನೆಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ (ವೀಣೆಶೇಷಣ್ಣ ಭವನ) ಆವರಣದಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರದಂದು ಆಯೋಜನೆಗೊಳ್ಳುತ್ತಿದೆ.

ಅರಮನೆಗಳ ನಗರಿ ಮೈಸೂರಿನಲ್ಲಿ ಜರುಗಲಿರುವ ಈ ವಿಶೇಷ ನೃತ್ಯೋತ್ಸವದಲ್ಲಿ ನಾಲ್ಕು ಮಂದಿ ವಿಶಿಷ್ಟ ಕಲೆ, ವೈವಿಧ್ಯಮಯ ಪ್ರತಿಭೆಯುಳ್ಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಭಾಗವಹಿಸಿ   ವಿಕಾರಿ ನಾಮ ಸಂವತ್ಸರ, ಕೃಷ್ಣ ಪಕ್ಷ, ವಸಂತ ಋತು, ವೈಶಾಖ ಮಾಸದ ಪ್ರಯುಕ್ತ ನಗರದ ಜನತೆಗೆ ವಿಶೇಷ ಮೆರುಗನ್ನು ನೀಡಿ ಕಂಗೊಳಿಸಲಿದ್ದಾರೆ. ಈ ನೃತ್ಯ ಸರಣಿಯ 36ನೆಯ ಸಂಚಿಕೆಗೆ ಮೇ 19ರ ಭಾನುವಾರದಂದು ಸಂಜೆ 6 ಗಂಟೆಗೆ ಚಾಲನೆ ದೊರೆಯಲಿದೆ.

ದೇಬಾಶಿಶ್ ಪಟ್ನಾಯಕ್ (ಒಡಿಸ್ಸಿ ಕಲಾವಿದ)

ನೃತ್ಯಭಾಸ್ಕರ್ (ಎಂ.ಎ.ನೃತ್ಯದಲ್ಲಿ) ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಒಡಿಸ್ಸಿ ನೃತ್ಯದಲ್ಲಿ ಕಳೆದ 26 ವರ್ಷಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಆರಂಭದಲ್ಲಿ ಗುರು ಕಾಶೀನಾಥ್ ರೌಲ್‍ರವರ ಅಡಿಯಲ್ಲಿ ಕಲಿತರು ಮತ್ತು ಪ್ರಸ್ತುತ ಗುರು ದುರ್ಗಾಚರಣ್ ರಣಬೀರ್‍ರವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದಾರೆ. ದೇಬಾಶಿಶ್ 39 ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಭಾರತದ ಸಂಸ್ಕೃತಿ ಸರ್ಕಾರ ಇಲಾಖೆಯಿಂದ ಹಿರಿಯ ವಿದ್ಯಾರ್ಥಿ ವೇತನ ಮತ್ತು ಜ್ಯೂನಿಯರ್ ಫೆಲೋಶಿಪ್‍ನ ಉಪನ್ಯಾಸಕರಾಗಿದ್ದಾರೆ. ದೂರದರ್ಶನ ಕೇಂದ್ರದ ದೆಹಲಿಯ ‘ಎ’ ಗ್ರೇಡ್ ಕಲಾವಿದರಾಗಿದ್ದಾರೆ.

ಕಾಳಿದಾಸ್ ಎಸ್. ಪಾನಿಕರ್ (ಭರತನಾಟ್ಯ ಕಲಾವಿದ)

ಗುರು ಜೀವನ್‍ರವರ ಶಿಷ್ಯರಾಗಿದ್ದು (ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನ ಅಲ್ಯುಮಿನಿ) ಮತ್ತು ಗುರು ಸುನ್ನರೇಶನ್, ಗುರು ಆರ್.ಎಲ್.ವಿ.ರಘು ನಾರಾಯಣನ್ ಹಾಗೂ ಪಟ್ಟೋಮ್ ಜಿ.ಸನ್ನಿಕುಮಾರ್ ಅಡಿಯಲ್ಲಿ ಮುಂದುವರೆಯುತ್ತಿದ್ದ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಕಾಳಿದಾಸ್ ಇವರ ನೃತ್ಯ ಸಂಸ್ಥೆ ‘ನಾಟ್ಯರ್ಪಣಾ ಇನ್ಸ್‍ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ಡಾನ್ಸ್’ ಅನ್ನು ಮುನ್ನಡೆಸುತ್ತಿದ್ದಾರೆ. ಇವರು ದೂರದರ್ಶನ ಶ್ರೇಣೀಕೃತ ಕಲಾವಿದ. ಇವರಿಗೆ 2018ರಲ್ಲಿ ‘ನಾಟ್ಯಪೂರ್ಣಿಮ’ ಪ್ರಶಸ್ತಿ, ಕೇರಳದ ‘ಕಲಾಲ್ಸವಂ’ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಿಶಾಂತ್ ಪಾನಿಕರ್ (ಕಥಕ್ ಕಲಾವಿದ)

ಗುರು ಮುರಾರಿ ಶರಣ್ ಗುಪ್ತಾರವರ ಶಿಷ್ಯರಾಗಿದ್ದು, ಪ್ರಸ್ತುತದಲ್ಲಿ ಗುರು ವಿಭಾರಾಮಸ್ವಾಮಿಯವರಿಂದ ತರಬೇತಿ ಪಡೆದಿದ್ದಾರೆ.   ಪದ್ಮವಿಭೂಷಣ್ ಪಂಡಿತ್ ಬಿರ್ಜು ಮಹಾರಾಜ್, ಮಮತಾ ಮಹಾರಾಜ್ ಹಾಗೂ   ದುರ್ಗಾ ಆರ್ಯರವರು ನಡೆಸಿದ ಕಾರ್ಯಾಗಾರಗಳಲ್ಲಿ ಕಥಕ್ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಶಮಂತ್ ಎಸ್.ರಾವ್ (ಕೂಚಿಪುಡಿ ಕಲಾವಿದ)

ಬೆಂಗಳೂರಿನ ಶಿವಪ್ರಿಯ ನೃತ್ಯ ಶಾಲೆಯಲ್ಲಿ ಕಲಾ ಆರತಿ ರತ್ನ ಗುರು ಡಾ.ಶಾಂತಾರಾಂರವರ ಮಾರ್ಗದರ್ಶನದಲ್ಲಿ ಭರತನಾಟ್ಯ ಮತ್ತು ಕುಚಿಪುಡಿ ತರಬೇತಿಯನ್ನು ಮುಂದುವರೆಸುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ಮೈಸೂರು ಬಿ.ನಾಗರಾಜ್‍ರವರು  ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9341288391 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: