ಪ್ರಮುಖ ಸುದ್ದಿ

ಮಂಗಳೂರಿನಲ್ಲಿ ಮಹಿಳೆಯ ಭೀಕರ ಹತ್ಯೆ ಪ್ರಕರಣ : ಮೂರೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು ; ಆರೋಪಿ ವಶಕ್ಕೆ

ರಾಜ್ಯ(ಮಂಗಳೂರು)ಮೇ.15:- ಮಂಗಳೂರಿನಲ್ಲಿ ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರೇ ದಿವಸದಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಶ್ರೀಮತಿ ಶೆಟ್ಟಿ(35) ಎಂಬವರೇ ಕೊಲೆಯಾದ ಮಹಿಳೆಯಾಗಿದ್ದು, ಹಂತಕರು ಭೀಕರವಾಗಿ ಕೊಲೆ ಮಾಡಿ ದೇಹವನ್ನು ಮೂರು ಕಡೆ ಎಸೆದಿದ್ದರು. 30 ಪೊಲೀಸ್ ಅಧಿಕಾರಿಗಳ  ಮೂರು ತಂಡ ಪ್ರಕರಣ ಭೇದಿಸಿದೆ. ವೈಯುಕ್ತಿಕ ದ್ವೇಷದಿಂದ ಮಹಿಳೆಯ ಕೊಲೆ ನಡೆದಿದೆ ಎನ್ನಲಾಗಿದೆ. ಹಣಕಾಸಿನ  ವಿಚಾರದಲ್ಲಿ ಶ್ರೀಮತಿ ಶೆಟ್ಟಿಯನ್ನು ಕೊಲೆಗೈಯ್ಯಲಾಗಿದ್ದು, ಜಾನ್ಸನ್ ಎಂಬಾತನೇ ಕೊಲೆಗೈದಿದ್ದಾನೆ.  ಹೆಂಡತಿ ವಿಕ್ಟೋರಿಯಾ ಜೊತೆ ಸೇರಿ ಶ್ರೀಮತಿ ಶೆಟ್ಟಿಯನ್ನು ಭೀಕರವಾಗಿ ಕೊಲೆ ಮಾಡಿದ್ದು, ಬಂಧನ ಕಾರ್ಯಾಚರಣೆ ವೇಳೆ ಆತ್ಮಹತ್ಯೆ ಗೆ ಯತ್ನಿಸಿದ್ದಾನೆ. ಆರೋಪಿ ಜಾನ್ಸನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಮತಿ ಶೆಟ್ಟಿ ಜೊತೆ ಸಾಲದ ರೂಪದಲ್ಲಿ ದುಡ್ಡು ಪಡೆದಿದ್ದ. ದುಡ್ಡು ಕೊಡದಿರುವುದಕ್ಕೆ ಶ್ರೀಮತಿ ಶೆಟ್ಟಿ ಗಲಾಟೆ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ ಶ್ರೀಮತಿ ಶೆಟ್ಟಿ ಆರೋಪಿ ಮನೆಗೆ ಬಂದಿದ್ದರು. ಈ ವೇಳೆ ಶ್ರೀಮತಿ ಶೆಟ್ಟಿ ಯನ್ನು ಹಂತಕ ಜಾನ್ಸನ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ದಂಪತಿ ರಾತ್ರಿ ನಗರದ ಮೂರು ಕಡೆ ದೇಹವನ್ನು ಎಸೆದಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: