
ಮೈಸೂರು
ಮನುಷ್ಯ ಆರೋಗ್ಯವಾಗಿರ ಬೇಕಾದರೆ ಸ್ವಚ್ಛತೆ ಅತೀ ಅಗತ್ಯ : ಡಾ. ಹೆಚ್ ಬಸವನಗೌಡಪ್ಪ
ಮೈಸೂರು,ಮೇ.15:- ಜೆ ಎಸ್ ಎಸ್ ಆಸ್ಪತ್ರೆ ಮತ್ತು ಸೋಂಕು ನಿಯಂತ್ರಣ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಶುಲ್ಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಆಸ್ಪತ್ರೆಗಳು ಮತ್ತು ಆರೋಗ್ಯ ಸಂರಕ್ಷಣಾ ವ್ಯವಸ್ಥೆಯಲ್ಲಿ ಕೈ ನೈರ್ಮಲ್ಯದ ಪಾಮುಖ್ಯತೆ ” ಬಗ್ಗೆ ಅರಿವು ಮೂಡಿಸಲು ವಿಶ್ವ ಕೈ ನೈರ್ಮಲ್ಯ ದಿನವನ್ನಿಂದು ಆಚರಿಸಲಾಯಿತು.
ಜೆ ಎಸ್ ಎಸ್ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಾ. ಎಂ ದಯಾನಂದ, ಡಾ. ಹೆಚ್ ಬಸವನಗೌಡಪ್ಪ ಅವರು ಚಾಲನೆ ನೀಡಿದರು.
ವಿವಿಧ ಸೋಂಕುಗಳು , ಕೀಟಾಣುಗಳು ಮೊದಲು ನಮ್ಮ ದೇಹವನ್ನು ಪ್ರವೇಶಿಸುವುದು ಕೈಗಳ ಮೂಲಕ , ಅಲ್ಲದೆ ನಮ್ಮ ದೈನಂದಿನ ಕೆಲಸಗಳಲ್ಲಿ ಕೈಗಳ ಬಳಕೆ ಹೆಚ್ಚಿರುವುದರಿಂದ ಇವುಗಳ ಮೂಲಕ ಹೆಚ್ಚು ಸೋಂಕು ರೋಗಗಳು ಅಥವಾ ಕೀಟಾಣುಗಳು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಆದ್ದರಿಂದಲೇ ಕೈಗಳ ಸ್ವಚ್ಛತೆಗೆ ಪ್ರಧಾನ ಆದ್ಯತೆ ನೀಡಬೇಕು ಎಂಬ ಅರಿವು ಮೂಡಿಸಲಾಯಿತು.
ಈ ಸಂದರ್ಭ ಡಾ. ಹೆಚ್ ಬಸವನಗೌಡಪ್ಪ ಮಾತನಾಡಿ ಮನುಷ್ಯ ಆರೋಗ್ಯವಾಗಿರ ಬೇಕಾದರೆ ಸ್ವಚ್ಛತೆ ಅತೀ ಅಗತ್ಯ. ದೇಹದ ಎಲ್ಲಾ ಭಾಗಗಳು ಸ್ವಚ್ಛವಾಗಿದ್ದರೆ ಮಾತ್ರ ಅಲ್ಲಿ ಸೋಂಕು ಮತ್ತು ಇನ್ನಿತರ ಕೀಟಾಣುಗಳ ಬಾಧೆಯನ್ನು ತಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಹಿತ್ ಭಾಟೀಯಾ, ಡಾ.ಎಂ.ಗುರುಸ್ವಾಮಿ, ಡಾ.ಎಂ.ಡಿ.ರವಿ, ಡಾ. ಸುಮನ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)