ಮೈಸೂರು

ಸೂರ್ಯನಮಸ್ಕಾರ ದೇಹಕ್ಕೆ ಒಳ್ಳೆಯದು : ಜೆ.ಜಗದೀಶ್ ಹೇಳಿಕೆ

ಮೈಸೂರಿನ ಯೋಗ ಒಕ್ಕೂಟದ ವತಿಯಿಂದ ರಥಸಪ್ತಮಿ ಹಿನ್ನೆಲೆಯಲ್ಲಿ ಸೂರ್ಯನಮಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೋಟೆ ಆಂಜನೇಯ ದೇವಾಸ್ಥಾನದ ಮುಂಭಾಗ ಭಾನುವಾರ ಬೆಳಿಗ್ಗೆ ಆಯೋಜಿಸಲಾದ ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡ ಐನೂರಕ್ಕೂ ಅಧಿಕ ಮಂದಿ ಸೂರ್ಯದೇವರಿಗೆ ದೀರ್ಘದಂಡ ಪ್ರಣಾಮ ಮಾಡಿದರು. ಈ ಸಂದರ್ಭ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡ ಮಹಾನಗರಪಾಲಿಕೆ ಆಯುಕ್ತ ಜೆ.ಜಗದೀಶ್ ಮಾತನಾಡಿ ಯೋಗ ಕೆಲವರಿಗೆ ಮಾತ್ರ ಸೀಮಿತ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯೋಗವನ್ನು ಮಾಡುವುದರಿಂದ ದೇಹದ ಆರೋಗ್ಯ ಸ್ಥಿತಿ ಸುಧಾರಣೆಯಲ್ಲಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಯೋಗದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಸೂರ್ಯ ನಮಸ್ಕಾರ ದೇಹಕ್ಕೆ ಒಳ್ಳೆಯದು ಎಂದರು.

ಸುಮಾರು ಒಂದೂವರೆ ಗಂಟೆಗಳ ಕಾಲ ಸೂರ್ಯನಮಸ್ಕಾರ ನಡೆಯಿತು. ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡವರು ಈ ಸಮಯದಲ್ಲಿ ಎಲ್ಲವನ್ನೂ ಮರೆತು, ಒತ್ತಡದ ಬದುಕಿನಿಂದ ಹೊರಬಂದು ಮನಸ್ಸನ್ನು ಪ್ರಶಾಂತಗೊಳಿಸಿಕೊಂಡರು.

Leave a Reply

comments

Related Articles

error: