ಪ್ರಮುಖ ಸುದ್ದಿ

ಮಳೆಹಾನಿ ಸಂತ್ರಸ್ತರಿಗೆ ಮನೆಗಳ ಹಂಚಿಕೆ : ಯಾರ್ಯಾರಿಗೆ ಮನೆ ಸಿಕ್ಕಿದೆ ?

ರಾಜ್ಯ(ಮಡಿಕೇರಿ )ಮೇ.16:- ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಭೂ ಕುಸಿತ, ಪ್ರವಾಹದಿಂದಾಗಿ ಸಂತ್ರಸ್ತರಾದ ಮೊದಲನೇ ಹಂತದ ಪಟ್ಟಿಯಲ್ಲಿನ ಪೂರ್ಣ, ತೀವ್ರ ವಾಸದ ಮನೆ ಹಾನಿಯಾದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಕರ್ಣಂಗೇರಿ ಗ್ರಾಮದ ಸ.ನಂ.178/1ರ 4.80 ಎಕ್ರೆ ಜಾಗದಲ್ಲಿ ನಿರ್ಮಿಸಿರುವ 35 ಮನೆಗಳನ್ನು ಕರ್ಣಂಗೇರಿಯಲ್ಲಿಯೇ ತಮಗೆ ಮನೆಗಳು ಬೇಕೆಂದು ಕೋರಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ತಿಳಿಸಿದ್ದಾರೆ.

ಕರ್ಣಂಗೇರಿ ಗ್ರಾಮದ ಸ.ನಂ.178/1 ರಲ್ಲಿ ಅನುಮೋದಿತ ಬಡಾವಣೆ ನಕ್ಷೆಯಂತೆ 35 ಮನೆಗಳನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗಿರುತ್ತದೆ. ಕರ್ಣಂಗೇರಿಯಲ್ಲಿಯೇ ತಮಗೆ ಮನೆ ಬೇಕೆಂದು 106 ಜನ ಸಂತ್ರಸ್ಥರು, ಫಲಾನುಭವಿಗಳು ತಮ್ಮ ಬೇಡಿಕೆಯಲ್ಲಿ ಕೇಳಿರುತ್ತಾರೆ. ಕರ್ಣಂಗೇರಿ ಗ್ರಾಮದ 3 ಜನ ಸಂತ್ರಸ್ಥರು ಮನೆ ಕಳೆದುಕೊಂಡಿದ್ದು, ಆ 3 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆ ನೀಡಲಾಗಿರುತ್ತದೆ. ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದಲ್ಲಿ ಬರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲಾಗುತ್ತಿರುವ ಸ್ಥಳಕ್ಕೆ ಕೇವಲ 2 ಕಿ.ಮೀ.ಅಂತರದೊಳಗೆ ಬರುವ ಸಂತ್ರಸ್ಥರಾಗಿರುವುದರಿಂದ ಆ 16 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಉಳಿದ 16ಮನೆಗಳನ್ನು   ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ಣಂಗೇರಿಯಲ್ಲಿ ಮನೆ ಕೋರಿರುವ ಎಲ್ಲಾ ಸಂತ್ರಸ್ತರನ್ನು ಸಭೆಗೆ ಆಹ್ವಾನಿಸಿ, ಅವರ ಸಮ್ಮುಖದಲ್ಲೇ ಲಾಟರಿ ಮೂಲಕ 16 ಜನರನ್ನು ಆಯ್ಕೆ ಮಾಡಲಾಗಿರುತ್ತದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: