Uncategorizedಮೈಸೂರು

ಸೀರೆಯಲ್ಲಿ ಮಿಂಚಿದ ಕನ್ಯೆಯರು !

ಭಾರತೀಯ ಸಾಂಪ್ರದಾಯಿಕ ಶೈಲಿ ಉಡುಗೆ ಸೀರೆಯ ವಿವಿಧ ವಿನ್ಯಾಸಗಳಲ್ಲಿ ಮಿಂಚಿದ್ದು ನಗರದ ಡ್ರೀಮ್ ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಶಾಲೆಯ ವಿದ್ಯಾರ್ಥಿಗಳು.

ಶನಿವಾರ ಶಾಲೆಯಲ್ಲಿ ಆಯೋಜಿಸಿದ್ದ ಫ್ಯಾಶನ್ ಷೋನಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆಯನ್ನೇ ವಿವಿಧ ವಿನ್ಯಾಸಗಳಲ್ಲಿ ತರೆವಾರು ರೀತಿಯಲ್ಲಿ ಉಟ್ಟು ಮಾರ್ಜಾಲ ನಡಿಗೆಯನ್ನು ನಡೆದ ವಿದ್ಯಾರ್ಥಿಗಳು ನೆರೆದಿದ್ದವರಿಗೆ ವಿವಿಧತೆಯಲ್ಲಿ ಏಕತೆಯನ್ನು ಭಾವವನ್ನು ಮೂಡಿಸಿದರು.

ಸೀರೆಯೊಂದೇ ಆಗಿದ್ದರೂ ಒಬ್ಬೊಬ್ಬರದು ಒಂದೊಂದು ವಿನ್ಯಾಸ, ಒಬ್ಬರದು ಗಾಢಕೆಂಪಿನ ರಾಜಸ್ಥಾನಿ ಶೈಲಿಯಾದರೆ, ಮತ್ತೊಬ್ಬರದು ನಸುಗೆಪ್ಪು ಬಣ್ಣದ ಸೀರೆಯಲ್ಲಿ ಕರಾವಳಿಯ ಜಾಲಗಾರರ ಶೈಲಿ ಬಿಂಬಿಸಿದ್ದು, ಹುಡುಗಿಯರ ನೆಚ್ಚಿನ ಬಣ್ಣ ಗುಲಾಬಿ ರಂಗಿನಲ್ಲಿ ಮಿಂಚಿದ್ದು ಇನ್ನೊಬ್ಬರದು, ಪಾರ್ಟಿ ಕಲರ್‍ ಕಪ್ಪು ಬಣ್ಣದ ರಾಜಸ್ಥಾನಿ ಶೈಲಿ ಸೀರೆಯಲ್ಲಿ ಮಿಂಚಿದ್ದು, ಅದರಂತೆ ಆಂಧ್ರಪ್ರದೇಶದ ಲಂಗಾದಾವಣಿ ಹೀಗೇ ಹತ್ತು ಹಲವು ರೀತಿಯ ವಿನ್ಯಾಸದಲ್ಲಿ ಮಿರಿ ಮಿಂಚಿದ ಲಲನೆಯರು, ಕೇವಲ ಸೀರೆಯಿಂದಷ್ಟೇ ಅಲ್ಲ, ವಸ್ತ್ರಕ್ಕೆ ಹೊಂದಿಕೆಯಾಗುವಂತಹ ಆಭರಣಗಳು ಅವರ ಕ್ರಿಯಾಶೀಲತೆಯನ್ನು ಓರೆಗಚ್ಚಿ ನೋಡುಗರ ಗಮನ ಸೆಳೆದರು.

Leave a Reply

comments

Related Articles

error: