ಮೈಸೂರು

ಹೊಸನೀತಿ ತರುವ ಸಮಯದಲ್ಲಿ ಉತ್ತಮ ಸಲಹೆಗಳನ್ನು ನೀಡಿದಲ್ಲಿ ಕೈಗಾರಿಕೋದ್ಯಮದಲ್ಲಿರುವ ನ್ಯೂನತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು,ಮೇ.16:- ಜಿಲ್ಲಾಮಟ್ಟದಲ್ಲಿ ಆಸಕ್ತಿ ಇದ್ದರೂ ಕೂಡ ಬಗೆಹರಿಸಲು ಸಾಧ್ಯವಾಗದ ವಿಚಾರಗಳು ಹಲವಾರು ಇವೆ. ಅದನ್ನು ರಾಜ್ಯಮಟ್ಟದಲ್ಲಿ ಹೊಸನೀತಿ ತರುವ ಸಮಯದಲ್ಲಿ ಉತ್ತಮ ಸಲಹೆಗಳನ್ನು ನೀಡಿದಲ್ಲಿ ಕೈಗಾರಿಕೋದ್ಯಮದಲ್ಲಿರುವ ನ್ಯೂನತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅವರಿಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ರಫ್ತುದಾರರು ಹಾಗೂ ವಾಣಿಜ್ಯೋದ್ಯಮಿಗಳಿಗಾಗಿ 2019-24ರ ಕರಡು ಕೈಗಾರಿಕಾ ನೀತಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿ 10-15ವರ್ಷಗಳಿಂದ ಕೈಗಾರಿಕೆಗಳು ಅಭಿವೃದ್ಧಿ ಕಾಣುತ್ತಿವೆ. ಬೇರೆ ಕಡೆ ರಫ್ತು ಕಡಿಮೆಆಗಿರಬಹುದು. ಕಾರ್ ಸೀಟ್ ಕವರ್. ಎಲ್ ಇಡಿ ಲೈಟ್ ಗಳು ಬೇರೆ ಕಡೆಯಿಂದ ಬರುತ್ತಿವೆ. ಹಲವಾರು ಪ್ರಕ್ರಿಯೆಗಳೇ ಆ ರೀತಿ ಇವೆ. ಬಂಡವಾಳ ಹಾಕಬೇಕು. ಇಂಟರೆಸ್ಟ್ ಇರತ್ತೆ. ಸಮಸ್ಯೆಗಳು ಕಾಣಿಸುತ್ತವೆ. ಅದಕ್ಕೆ ಇಲಾಖಾ ವತಿಯಿಂದ ಹೊಸ ನೀತಿ ತರಬೇಕು. ನಿಮ್ಮ ಕಡೆ ಇರುವ ಸಲಹೆಯನ್ನು ಸಂಕ್ಷಿಪ್ತವಾಗಿ, ನೆಗೆಟಿವ್ ಆಗಿರುವುದನ್ನು ಹೇಗೆ ತಿದ್ದುಪಡಿ ಮಾಡಬಹುದು ಎಂಬುದರ ಕುರಿತು ಸಲಹೆ ಸೂಚನೆಗಳನ್ನು ನೀಡಿ ಎಂದರು. ನಾಗನಹಳ್ಳಿ ರೈಲ್ವೆ ನಿಲ್ದಾಣ ಸೆಟ್ ಲೈಟ್ ಆಗಲಿದೆ. ಏರ್ ಪೋರ್ಟ್ ಕೂಡ ಅಭಿವೃದ್ಧಿಯಾಗಲಿದೆ. ಇನ್ನು ಐದು ವರ್ಷದಲ್ಲಿ ಅಧಿಕ ಬದಲಾವಣೆ ಕಾಣಬಹುದು. ಕನೆಕ್ಟಿವಿಟಿಯೂ ಚೆನ್ನಾಗಿರಲಿದ್ದು, ರಫ್ತು ಯಾಕೆ ಮಾಡಬಾರದೆಂದು ಚಿಂತನೆ ನಡೆಸಬೇಕು. ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳೂ ಕೂಡ ಈ ಸವಲತ್ತುಪಡೆಯಬಹುದು. ಆ ಒಂದು ನಿಟ್ಟಿನಲ್ಲಿ ನಿಮಗೆ ಏನೇನು ಬೇಕಿದೆ ಮತ್ತು ಕೊರತೆಗಳನ್ನು ಯಾವ ರೀತಿ ಸರಿಪಡಿಸಬಹುದು ಎಂಬುದನ್ನು ಸ್ವಲ್ಪ ಚಿಂತನೆ ಮಾಡಿ ಸಮಗ್ರ ಸಲಹೆ ನೀಡಿದರೆ ನೀತಿಯಲ್ಲಿ ಸೇರಿಸಿಕೊಳ್ಳಬಹುದು. ಇಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ರಫ್ತಾಗಬೇಕು. ಮುಕ್ತವಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಹೆಚ್.ವೀರಣ್ಣ, ಎಂಎಸ್ ಎಂ ಇ ನಿರ್ದೇಶನಾಲಯದ ಅಧಿಕ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಪ್ಲಾನಿಂಗ್ & ಪ್ರಾಜೆಕ್ಟ್ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: