ಪ್ರಮುಖ ಸುದ್ದಿಮೈಸೂರು

21 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ

ಉದ್ಯಮಶೀಲ ಕೌಶಲ್ಯ ತರಬೇತಿ

ಮೈಸೂರು,ಮೇ.16 : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ  ಅವೇಕ್ ಸಂಸ್ಥೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗಿ ಉಚಿತ ಬ್ಯೂಟಿ ಪಾರ್ಲರ್ ಉದ್ಯಮಶೀಲ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದೆಂದು ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷೆ ಎನ್.ಎಸ್.ಸಂಧ್ಯಾ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮೂಲದ ಅವೇಕ್ ಸಂಸ್ಥೆಯು ಕಳೆದ 35 ವರ್ಷಗಳಿಂದಲೂ ಮಹಿಳಾ ಸಬಲೀಕರಣಕ್ಕೆ ಹಾಗೂ ಉದ್ಯಮಶೀಲ ಕೌಶಲ್ಯ ತರಬೇತಿಗೆ ಒತ್ತು ನೀಡುತ್ತಿದ್ದು ತನ್ನ ಕಾರ್ಯವ್ಯಾಪ್ತಿಯನ್ನು ಮೈಸೂರಿಗೆ ವಿಸ್ತರಿಸಿದ್ದು, ಈ ನಿಟ್ಟಿನಲ್ಲಿ 21 ದಿನಗಳ ಈ ತರಬೇತಿಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಮೇ.20 ರಿಂದ ಜೂ.12ರವರೆಗೆ ಕೃಷ್ಣಮೂರ್ತಿಪುರಂನ ಸಂಸ್ಥೆಯಲ್ಲಿ ಈ ತರಬೇತಿ ನೀಡಲಿದ್ದು, ಎಸ್.ಎಸ್.ಎಲ್.ಸಿ ಮೇಲ್ಪಟ್ಟ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 18 ರಿಂದ 45 ವರ್ಷ ವಯೋಮಾನದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳು ಕ್ರೆಡಿಟ್-ಐ ಸಂಸ್ಥೆ, ನಂ.1241, 2ನೇ ಕ್ರಾಸ್, ಕೃಷ್ಣಮೂರ್ತಿಪುರಂ ಇಲ್ಲಿ ಲಭ್ಯವಿರಲಿವೆ. ಮೇ.19 ಕೊನೆ ದಿನವಾಗಿದೆ. ವಿವರಗಳಿಗೆ ಮೊ.ಸಂ. 9740996074, 0821-4258742 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: