ಮನರಂಜನೆ

ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ ಕನ್ನಡದ `ಡೇವಿಡ್’ ಸಿನಿಮಾ

ಬೆಂಗಳೂರು,ಮೇ 16- ಫ್ರಾನ್ಸ್ ನಲ್ಲಿ ನಡೆಯುವ ಕಾನ್ ಚಿತ್ರೋತ್ಸವ ಜಗತ್ತಿನ ಪ್ರಸಿದ್ಧ ಸಿನಿಮೋತ್ಸವದಲ್ಲಿ ಪ್ರಮುಖವಾದದ್ದು. ಈ ಚಿತ್ರೋತ್ಸವದಲ್ಲಿ ಕನ್ನಡದ ‘ಡೇವಿಡ್’ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಮೇ 14ರಿಂದ ಪ್ರಾರಂಭವಾಗಿರುವ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 25ರವರೆಗೆ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಭಾರ್ಗವ್ ಯೋಗಂಭರ್ ನಿರ್ದೇಶನದ ಡೇವಿಡ್ ಸಿನಿಮಾ ಪ್ರದರ್ಶನಗೊಳ್ಳಲಿದೆ. ಇದರಿಂದ ಇಡೀ ಚಿತ್ರತಂಡ ಸಂತಸದಿಂದಿದೆ. ಈ ಸಂತಸವನ್ನು ನಿರ್ದೇಶಕ ಭಾರ್ಗವ್ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಕನಸಲ್ಲ. ಕಲ್ಪನೆಗೂ ಮೀರಿದ್ದು, ಬೆಂಗಳೂರಿನಿಂದ ಕಾನ್ ಚಿತ್ರೋತ್ಸವಕ್ಕೆ ಎಂಟ್ರಿಯಾಗಿದ್ದೀವಿ. ಸಿನಿಮಾ ಪ್ರಪಂಚದಲ್ಲಿ ಅತೀ ದೊಡ್ಡ ಚಿತ್ರೋತ್ಸವವಿದು. ಇಲ್ಲಿ ಸಿನಿಮಾ ಪ್ರದರ್ಶನವಾಗಬೇಕು ಎನ್ನುವುದು ದೊಡ್ಡ ಕನಸಾಗಿತ್ತು. ಡೇವಿಡ್ ಸಿನಿಮಾ ಮೂಲಕ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಭಾರ್ಗವ್ ನಿರ್ದಶನದ ಚೊಚ್ಚಲ ಚಿತ್ರವೇ ಕಾನ್ ಫೆಸ್ಟಿವಲ್ ಗೆ ಎಂಟ್ರಿ ಕೊಟ್ಟಿದೆ. ಚಿತ್ರದಲ್ಲಿ ಶ್ರೇಯಸ್ ಚಿಂಗ, ಅವಿನಾಶ್ ಯಳಂದೂರು, ರಾಕೇಶ್ ಅಡಿಗ, ಕಾವ್ಯಾ ಶಾ, ರಮ್ಯಾ ರಮೇಶ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಕಾನ್ ಸಿನಿಮೋತ್ಸವದಲ್ಲಿ ಸಿನಿಮಾ ಪ್ರದರ್ಶನದ ಜೊತೆಗೆ ನಟಿಮಣಿಯರ ಕ್ಯಾಟ್ ವಾಕ್ ಕೂಡ ಅಷ್ಟೆ ಆಕರ್ಷಕವಾಗಿರುತ್ತೆ. ಜಗತ್ತಿನ ಬೇರೆ ಬೇರೆ ದೇಶದ ಟಾಪ್ ನಟಿಮಣಿಯರು ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿ ಗಮನ ಸೆಳೆಯುತ್ತಾರೆ. ಬಾಲಿವುಡ್ ನಿಂದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಸೋನಂ ಕಪೂರ್ ಭಾಗಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: