
ಮೈಸೂರು
ಮೈಸೂರು ಶೂಟ್ ಔಟ್ ಪ್ರಕರಣ : ಪೊಲೀಸ್ ಕಾಯ್ದೆ ಪ್ರಕಾರ ಕ್ರಮ ಜರುಗಿಸುತ್ತೇವೆ; ಕೆ.ಟಿ.ಬಾಲಕೃಷ್ಣ
ಮೈಸೂರು,ಮೇ.16:- ಮೈಸೂರು ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಗಂಟೆಗಳಿಂದ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಮಾಹಿತಿ ಕಲೆ ಹಾಕಿ ಕೆ ಆರ್ ಆಸ್ಪತ್ರೆಯಿಂದ ಹೊರ ಬಂದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಮಾತನಾಡಿ ಇಂದು ಬೆಳಿಗ್ಗೆ ಸುಮಾರು ಒಂಭತ್ತು ಮುಕ್ಕಾಲಿಗೆ ಘಟನೆ ಸಂಭವಿಸಿದೆ. ನೋಟ್ ಅಮಾನ್ಯೀಕರಣದ ಬಳಿಕ ನೋಟ್ ಬದಲು ಮಾಡಲು ಬಂದಿದ್ದರು. ನಿಖರ ಮಾಹಿತಿ ಬಳಿಕ ವಿಜಯನಗರ ಇನ್ಸಪೆಕ್ಟರ್ ಬಿ. ಜಿ. ಕುಮಾರ್ ದಾಳಿ ನಡೆಸಿದ್ದರು. ಮೂವರು ಆರೋಪಿಗಳು ಪೊಲೀಸರ ಮೇಲೆ ಮರು ದಾಳಿ ನಡೆಸಿದ್ದರು. ಈ ವೇಳೆ ಸಿಬ್ಬಂದಿಗಳ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಫೈರ್ ಮಾಡಿದ್ದಾರೆ. ಓರ್ವ ಆರೋಪಿಗೆ ಗುಂಡು ತಗುಲಿ ಮೃತ ಪಟ್ಟಿದ್ದಾನೆ. ಮೃತ ಆರೋಪಿ ಕುಟುಂಬಕ್ಕೆ ವಿಷಯ ತಿಳಿಸುತ್ತೇವೆ. ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಹಾಗೂ ಪೊಲೀಸ್ ಕಾಯ್ದೆ ಪ್ರಕಾರ ಕ್ರಮ ಜರುಗಿಸುತ್ತೇವೆ. ಪ್ರಕರಣ ತನಿಖೆ ಹಂತದಲ್ಲಿದೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)