ದೇಶ

ಶಸ್ತ್ರಾಸ್ತ್ರ ಒಯ್ಯುತ್ತಿದ್ದ ಅಪರಿಚಿತರಿಗಾಗಿ ತೀವ್ರ ಶೋಧ: ಮುಂಬೈ ಕರಾವಳಿಯಲ್ಲಿ ಕಟ್ಟೆಚ್ಚರ

ಈ ಪ್ರಕರಣದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಡಿಜಿಪಿ ಸತೀಶ್ ಮಾಥುರ್ ಗೆ ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಪಿ. ಭಕ್ಷಿ ಸೂಚಿಸಿದ್ದಾರೆ. ಮುಂಬೈ ಕರಾವಳಿಯಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಾಗಾರ ‘ಐಎನ್ಎಸ್ ಅಭಿಮನ್ಯು’ ಘಟಕಕ್ಕೆ ನೀಡಿದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಮುಂಬೈ ನಗರದಾದ್ಯಂತ ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದ್ದು, ಶಂಕಿತ ಉಗ್ರರ ರೇಖಾಚಿತ್ರವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಈ ಚಿತ್ರಗಳನ್ನು ನಗರದ ಎಲ್ಲ ಪೊಲೀಸ್ ಠಾಣೆಗೂ ಕಳುಹಿಸಲಾಗಿದೆ.

ಸೇನಾ ಸಮವಸ್ತ್ರ ಧರಿಸಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಉರಾನ್ ನೌಕಾ ನೆಲೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ನಿನ್ನೆ ಕೆಲ ವಿದ್ಯಾರ್ಥಿಗಳು ಹೇಳಿದ ಹಿನ್ನೆಲೆಯಲ್ಲಿ ಮುಂಬೈ ನಗರದೆಲ್ಲೆಡೆ ಹೈಅಲರ್ಟ್ ಘೋಷಿಸಲಾಗಿತ್ತು.

2008ರ ನವೆಂಬರ್ ನಲ್ಲಿ ಸಮುದ್ರ ಮಾರ್ಗವಾಗಿ ಬಂದ 10 ಉಗ್ರರು ಮುಂಬೈ ನಗರದಲ್ಲಿ ದಾಳಿ ನಡೆಸಿ 166 ಮಂದಿಯನ್ನು ಸಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ದೂರನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

Leave a Reply

comments

Related Articles

error: