ಮೈಸೂರು

ಕಾವಾ ಬಿ.ವಿ.ಎ ಪ್ರವೇಶಾತಿಗೆ ಅರ್ಜಿ ಆಹ್ವಾನ .ಜೂ.8 ಕೊನೆ ದಿನ

ಮೈಸೂರು,ಮೇ.16 : ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ನಿಂದ 2019-20ನೇ ಶೈಕ್ಷಣಿಕ ಸಾಲಿಗೆ ಬಿ.ವಿ.ಎ (ಬ್ಯಾಚುಲರ್ ಆಫ್ ವಿಜ್ವಲ್ ಆರ್ಟ್ಸ್) ಚಿತ್ರಕಲೆ, ಗ್ರಾಫಿಕ್ಸ್ , ಶಿಲ್ಪ, ಅನ್ವಯಕಲೆ, ಛಾಯಚಿತ್ರ ಮತ್ತು ಛಾಯಾಪತ್ರಿಕೋದ್ಯ ಮತ್ತು ಕಲಾ ಇತಿಹಾಸ ವಿಷಯದಲ್ಲಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ವಿಷಯದಲ್ಲಿ ದ್ವಿತೀಯ ಪಿಯು, ದೃಶ್ಯ ಕಲೆಯಲ್ಲಿ ಪೌಂಡೇಷನ್ ಕೋರ್ಸ್ ಗೆ ಪಿಯುಸಿ ಸಿಬಿಎಸ್ ಇ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಹರಾಗಿರುವರು.

ಅರ್ಜಿ ಮತ್ತು ಮಾಹಿತಿ ಪತ್ರ ರೂ.250/ ನಗದು ಅಥವಾ ಡಿಡಿ ಮೂಲಕ ಪಡೆಯಬಹುದಾಗಿದೆ, ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಕೊನೆ ಜೂ.8 ಆಗಿದೆ. ವಿವರಗಳಿಗೆ ದೂ.ಸಂ. 0821 2438931 ಅನ್ನು ಸಂಪರ್ಕಿಸಬಹುದು ಅಥವಾ [email protected] ಇಲ್ಲಿಗೆ ತಲುಪಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Tags

Related Articles

error: