ಕರ್ನಾಟಕಪ್ರಮುಖ ಸುದ್ದಿ

ಎಲ್ಲಿಯ ಅರಸು – ಎಲ್ಲಿಯ ಸಿದ್ದರಾಮಯ್ಯ ಹೋಲಿಕೆ!? ಶೋಭ ಕರಂದ್ಲಾಜೆ ವಾಗ್ದಾಳಿ

ಬೆಂಗಳೂರು (ಮೇ 16): ಸಿದ್ದರಾಮಯ್ಯ ತಮ್ಮನ್ನು ದೇವರಾಜ್ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ಬಿಜೆಪಿ ದೂರಿದೆ. ಸಿದ್ದರಾಮಯ್ಯನವರಿಗೆ ನಾಚಿಕೆ ಆಗಬೇಕು. ಎಲ್ಲಿನ ಅರಸು ಎಲ್ಲಿನ ಸಿದ್ದರಾಮಯ್ಯ? ರಿಯಲ್ ಎಸ್ಟೇಟ್ ದಂಧೆ ಮಾಡುವವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ ಎಂದು ಹುಬ್ಬಳ್ಳಿಯಲ್ಲಿ ಸಂಸದೆ‌ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ಅರಸು ಅವರು ನಿಮ್ಮಂತೆ ಧರ್ಮ ವಿಭಜನೆಯ ಕೆಲಸ ಮಾಡಲಿಲ್ಲ. ಅನ್ನಭಾಗ್ಯ ಅಕ್ಕಿಯಲ್ಲಿ ಹುಳ, ನುಸಿ ಇದೆ. ಅಂತಹ ಅಕ್ಕಿಯನ್ನು ನಮ್ಮಲ್ಲಿ ಕೋಳಿಗಳೂ ತಿನ್ನಲ್ಲ. ಅದನ್ನು ಗರ್ಭಿಣಿಯರಿಗೆ ತಿನ್ನಿಸುತ್ತಿದ್ದಾರೆ. ಗೋಂಡಾಳ ಬಂದಂತ ಅಕ್ಕಿ ಕೊಟ್ಟು ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನವರು ಚುನಾವಣೆ ಸಂದರ್ಭದಲ್ಲಿ ಕುಂದಗೋಳ ಮತ್ತು ಚಿಂಚೋಳಿಗೆ ಬಂದಿದ್ದಾರೆ. ಈ ಸರ್ಕಾರ ಮುಂದುವರಿಯಲು ಯಾವುದೇ ನೈತಿಕತೆಯಿಲ್ಲ ಎಂದು ಟೀಕಿಸಿದರು. (ಎನ್.ಬಿ)

Leave a Reply

comments

Related Articles

error: