ಮೈಸೂರು

ಗಮನ ಸೆಳೆದ ಶ್ವಾನಪ್ರದರ್ಶನ

ಪುಟ್ಟ ಬಾಯಗಲಿಸಿ ನಾಲಿಗೆ ಹೊರಚಾಚಿದ, ಹೆದರಿಕೆ ಹುಟ್ಟಿಸುವ ದೊಡ್ಡ ಬಾಯಿಯ, ಮೈತುಂಬಾ ಕೂದಲನ್ನು ಹೊಂದಿದ ವಿವಿಧ ಜಾತಿಯ ಒಂದಕ್ಕಿಂತ ಒಂದು ಶ್ವಾನಗಳು ಶ್ವಾನಪ್ರಿಯರನ್ನು ಗಮನ ಸೆಳೆದವು.

ಮೈಸೂರಿನ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಕೆನೈಲ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಭಾನುವಾರ ಆಯೋಜಿಸಲಾದ ಶ್ವಾನ ಪ್ರದರ್ಶನದಲ್ಲಿ ಡಾಬರ್ ಮನ್, ಸೇಂಟ್ ಬರ್ನಾರ್ಡ್, ಗೋಲ್ಡನ್ ರಿ ಟ್ರಿವರ್, ಜರ್ಮನ್ ಶಫರ್ಡ್, ಡ್ಯಾಶ್ ಸೌಂಡ್, ಮುಧೋಳ, ಪಗ್, ಮಿನಿಯೇಚರ್ ಪಿಂಚರ್, ಪಮೋರಿಯನ್, ಪಿಟ್ ಬಾಲ್ ಸೇರಿದಂತೆ ವಿವಿಧ ತಳಿಯ ಶ್ವಾನಗಳು ಗಮನ ಸೆಳೆದವು.

ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರಗಳಿಂದಲೂ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆತರಲಾಗಿತ್ತು.  ವಿಭಿನ್ನ ತಳಿಯ ಚಿತ್ರ, ವಿಚಿತ್ರವಾಗಿ ಬೊಗಳುವ, ಅರಚುವ, ಮೈಯ್ಯೆಲ್ಲಾ ಬಂಗಾರದಂತೆ ಹೊಳೆಯುವ ಶ್ವಾನ ಪ್ರದರ್ಶನ ನಿರೀಕ್ಷೆಗೂ ಮೀರಿ ಸಾರ್ವಜನಿಕರ ಗಮನ ಸೆಳೆಯಿತು. ತಮ್ಮ ಮಾಲಿಕರ ಆದೇಶವನ್ನು ಪಾಲಿಸುತ್ತಾ, ಶಿಸ್ತಿನ ಸಿಪಾಯಿಯಂತೆ ಹೆಜ್ಜೆ ಹಾಕಿದವು. ಸಾರ್ವಿವಜನಿಕರು ನೂತನ ತಳಿಯ ಶ್ವಾನಗಳನ್ನು ಆಶ್ಚರ್ಯಚಕಿತರಾಗಿ ನೋಡಿ ಆನಂದ ಪಡುತ್ತಿದ್ದರು.

ಶಾಸಕ ವಾಸು ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶ್ವಾನಪ್ರಿಯರಿಗೆ ವಿವಿಧ ತಳಿಯ ಶ್ವಾನಗಳನ್ನು ನೋಡುವುದಕ್ಕೆ ಅವಕಾಶ ಸಿಕ್ಕಂತಾಗುತ್ತಿದೆ ಎಂದು ಬಣ್ಣಿಸಿದರು. ಮಂಜು ಅವರು ಶ್ವಾನಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.  ಈ ಸಂದರ್ಭ ಮಾಜಿ ಮುಡಾ ಅಧ್ಯಕ್ಷ ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ , ಕೆನೈಲ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷ ಮಂಜು, ಮುಡಾ ಅಧ್ಯಕ್ಷ ಧ್ರುವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: