ಮೈಸೂರು

35 ಲಕ್ಷ ರೂ.ವೆಚ್ಚದಲ್ಲಿ ಎರಡು ಕ್ರಾಸ್ ರಸ್ತೆ, ಎರಡು ಬದಿಯಲ್ಲಿ ಮಳೆ ನೀರು ಚರಂಡಿ ನಿರ್ಮಿಸುವ ಕಾರ್ಯಕ್ಕೆ ಶಾಸಕ ಎಸ್ ಎ ರಾಮದಾಸ್ ಗುದ್ದಲಿ ಪೂಜೆ

ಮೈಸೂರು,ಮೇ.17:- ವಾರ್ಡ್ ನಂ. 51 ರ ಅಗ್ರಹಾರ ದಲ್ಲಿರುವ ಶಂಕರ ಮಠ 1 ನೇ ಕ್ರಾಸ್ ಮತ್ತು ಶಂಕರ ಮಠ 2 ನೇ ಕ್ರಾಸ್ ನಲ್ಲಿ ಒಳಚರಂಡಿ ಸಮಸ್ಯೆ ಮತ್ತು ಮಳೆ ಬಂದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಿಗೆ  ಬಹಳಷ್ಟು ತೊಂದರೆಯಾಗುತ್ತಿರುವುದನ್ನು ಮನಗಂಡು ನಗರ ಪಾಲಿಕೆ ಸಾಮಾನ್ಯ ನಿಧಿಯಿಂದ 35 ಲಕ್ಷ ರೂ.ವೆಚ್ಚದಲ್ಲಿ ಎರಡು ಕ್ರಾಸ್ ರಸ್ತೆ, ಎರಡು ಬದಿಯಲ್ಲಿ ಮಳೆ ನೀರು ಚರಂಡಿ ನಿರ್ಮಿಸುವ ಕಾರ್ಯಕ್ಕೆ ಇಂದು ಶಾಸಕ, ಎಸ್ ಎ ರಾಮದಾಸ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಲ್ಲಿನ ಪಾಲಿಕೆ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಬಿ ವಿ ಮಂಜುನಾಥ್, ಕ್ಷೇತ್ರದ ಉಪಾಧ್ಯಕ್ಷರಾದ ಬಾಲಕೃಷ್ಣ, ವಾರ್ಡ್ ಅಧ್ಯಕ್ಷರಾದ ಗುರುರಾಜ್ ಶೆಣೈ, ಪ್ರಧಾನ ಕಾರ್ಯದರ್ಶಿ ಧರ್ಮಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ವಿ ರೇಖಾ, ಕಾವೇರಿ, ಶಿವಕುಮಾರಿ, ಸುಧಾ, ವೀಣಾ,  ವೆಂಕಟೇಶ್, ವಾದಿರಾಜ್ ಬಲ್ಲಾಳ್, ಯುವ ಮೋರ್ಚಾ ಅಧ್ಯಕ್ಷ ಸುಭಾಷ್,  ರಾಜ್‍ಕುಮಾರ್, ಪ್ರಸನ್ನ,  ನಾರಾಯಣ್, ಶಿವರಾಜ್, ಪುರೋಹಿತರಾದ ಚಂದ್ರಶೇಖರ್ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: