ಪ್ರಮುಖ ಸುದ್ದಿಮೈಸೂರು

ಮೇ.19ರಂದು ಸಿಎಂ ಹೆಚ್.ಡಿ.ಕೆ.ಯವರಿಂದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಕೃತಿಗಳ ಲೋಕಾರ್ಪಣೆ

ಮೈಸೂರು,ಮೇ.17 :  ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಸಮುದಾಯದ ನಾಯಕರು’ ಹಾಗೂ ‘ಸಮಾಜಮುಖಿ ಶ್ರೀಸಾಮಾನ್ಯರು’ ಎಂಬ ಎರಡು ಕೃತಿಗಳನ್ನು ಸಿಎಂ. ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸುವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ.19ರಂದು, ಬೆಳಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ವಾಸು ಇರಲಿದ್ದಾರೆ.

ಕೃತಿ ಕುರಿತು ಶಾಸಕ ಹೆಚ್.ವಿಶ್ವನಾಥ್, ಸಂಸ್ಕೃತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಮಾತನಾಡುವರು, ಸಂಸದರಾದ ಆರ್.ಧ್ರವನಾರಾಯಣ್, ಪ್ರತಾಪ್ ಸಿಂಹ, ಶಾಸಕರಾದ ಮರಿತಿಬ್ಬೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಇನ್ನಿತರರು ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಮೈಸೂರು , ಚಾಮರಾಜನಗರ ರಾಜಕೀಯ ಇತಿಹಾಸವುಳ್ಳ ‘ಸಮುದಾಯದ ನಾಯಕರು’ ಕೃತಿ ಹಾಗೂ ಸಮಾಜಮುಖಿ ವ್ಯಕ್ತಿ ಚಿತ್ರಗಳನ್ನ ಒಳಗೊಂಡ ‘ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿಗಳ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೂಪ ಪ್ರಕಾಶನದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾಹಿತಿ ಪ್ರೊ.ಜಯಪ್ಪ ಹೊನ್ನಾಳ್ಳಿ, ಹಿರಿಯ ಪತ್ರಕರ್ತ ಹಾಗೂ ಕೃತಿ ಲೇಖಕ ಅಂಶಿ ಪ್ರಸನ್ನ, ರಂಗಕರ್ಮಿ ರಾಜಶೇಖರ ಕದಂಬ ಹಾಗೂ ರೂಪ ಪ್ರಕಾಶನದ ಮಹೇಶ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: