ಪ್ರಮುಖ ಸುದ್ದಿಮೈಸೂರು

ಕಲ್ಯಾಣ ಮಂಟಪ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ : ಟ್ರಸ್ಟ್

ಮೈಸೂರು,ಮೇ.17 : ತಾಲೂಕಿನ ಬಿದರಗೂಡಿನಲ್ಲಿರುವ ಕೋಟಿಗೊಬ್ಬ ಶರಣ ಮಹೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ನ್ಯಾಯಾಲಯದಿಂದ ಅನುಮತಿ ದೊರೆತಿದ್ದು, ಸದ್ಯದಲ್ಲೇ ನಿರ್ಮಾಣಕಾರ್ಯ ಆರಂಭವಾಗಲಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಡಿ. ಶಿವಣ್ಣ ತಿಳಿಸಿದರು.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ತಂದೆ ತಾಯಿ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ತಾವೇ ತಮ್ಮ ಸ್ವಂತ ಹಣದಿಂದ ದೇವಸ್ಥಾನಕ್ಕಾಗಿ ನಿರ್ಮಿಸಿಕೊಡಲಿರುವುದಾಗಿ ತಿಳಿಸಿದ ನಂತರ ನ್ಯಾಯಾಲಯದ ಅದಕ್ಕೆ ಸಮ್ಮತಿ ನೀಡಿದೆ.

ಇನ್ನು, ಕಲ್ಯಾಣ ಮಂಟಪ ನಿರ್ಮಾಣವಾದ ಬಳಿಕ ಅದರಿಂದ ಬರುವ ಬಾಡಿಗೆ ಹಣವನ್ನು ದೇವಸ್ಥಾನಕ್ಕೇ ಬಳಸಲಾಗುವುದೇ ಹೊರತು ತಮ್ಮ ಸ್ವಂತ ಉದ್ದೇಶಕ್ಕಲ್ಲ ಎಂದು ಸ್ಪಷ್ಟ ಪಡಿಸಿ, ನಿರ್ಮಾಣ ಕಾರ್ಯಕ್ಕೆ ಇತರರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಟ್ರಸ್ಟ್‌ನ ಕೃಷ್ಣ, ಚಿಕ್ಕಾಳು, ಶಿವು, ಸಿದ್ದರಾಮು, ರವಿಕುಮಾರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: