ಮನರಂಜನೆ

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ‘ಅರಿಷಡ್ವರ್ಗ’ ಪ್ರದರ್ಶನ

ಬೆಂಗಳೂರು,ಮೇ 17-ಬಗ್ರಿ ಫೌಂಡೇಷನ್ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಬಾರಿ ಕನ್ನಡದಿಂದ ಅರಿಷಡ್ವರ್ಗಸಿನಿಮಾ ಪ್ರದರ್ಶನಗೊಳ್ಳಲಿದೆ.

ಹತ್ತು ವರ್ಷಗಳ ಹಿಂದೆ ದೂರದ ಲಂಡನ್ ನಲ್ಲಿ ಸೌತ್ ಏಷ್ಯನ್ ಸಿನಿಮಾಗಳ ಪ್ರದರ್ಶನಕ್ಕಾಗಿಯೇ ಹುಟ್ಟಿಕೊಂಡಿದ್ದೆ ಬಗ್ರಿ ಫೌಂಡೇಷನ್ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌. ಜೂನ್ 23 ಮತ್ತು 26 ಎರಡು ಶೋನಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಈ ಫೆಸ್ಟಿವಲ್ ಭಾಗವಹಿಸುವುದು ಎಂದರೆ ಇಂಡಿಯನ್ ಫಿಲ್ಮ್ ಗಳಿಗೆ ಯುರೋಪ್ ನಲ್ಲಿ ಸಿಗುವ ದೊಡ್ಡ ಗೌರವ. ಅದಕ್ಕೆ ನಮ್ಮ ಚಿತ್ರ ಆಯ್ಕೆಯಾಗಿದೆ. ಅಲ್ಲಿನ ಕನ್ನಡಿಗೆರಲ್ಲರನ್ನೂ ಒಟ್ಟಾಗಿಸಿ ಸಿನಿಮಾ ತೋರಿಸುವುದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಾವು ಚಿತ್ರವನ್ನು ಕಮರ್ಷಿಯಲ್ ದೃಷ್ಟಿಯಿಂದಲೇ ಮಾಡಿದ್ದರೂ ಇಲ್ಲಿ ಕಲಾತ್ಮಕ ಅಂಶಗಳು ಇವೆ. ಇದೇ ಕಾರಣಕ್ಕೆ ನಮ್ಮ ಸಿನಿಮಾ ಆಯ್ಕೆಯಾಗಿದೆ ಎನ್ನಿಸುತ್ತದೆ ಎಂದು ನಿರ್ಮಾಪಕ ಹರೀಶ್ ಮಲ್ಯ ಹೇಳಿದ್ದಾರೆ.

ನಿರ್ದೇಶಕ ಅರವಿಂದ್ ಕಾಮತ್ ಅವರಿಗೆ ಇದು ಮೊದಲ ಪ್ರಯತ್ನ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಸಂಕೇತವಾಗಿ ಇಟ್ಟುಕೊಂಡು ಆರು ಪ್ರಧಾನ ಪಾತ್ರಗಳೊಂದಿಗೆ ಒಂದು ಮರ್ಡರ್ ಮಿಸ್ಟರಿಯನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ತಯಾರಿಯೊಂದಿಗೆ ಥಿಯೇಟರ್ ಗೆ ಲಗ್ಗೆ ಇಡುವ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ. (ಎಂ.ಎನ್)

Leave a Reply

comments

Related Articles

error: