ಮೈಸೂರು

ಬ್ಯಾಂಕ್ ನಲ್ಲಿರಿಸಲಾದ ಮೊಬೈಲ್ ಕಳವು : ವ್ಯಕ್ತಿಯ ಬಂಧನ

ಆರ್.ಟಿ.ಐ ಕಾರ್ಯಕರ್ತನೋರ್ವ ಬ್ಯಾಂಕ್ ಸಿಬ್ಬಂದಿಯೋರ್ವರ ಮೊಬೈಲ್ ಕಿಸೆಗಿಳಿಸಿ ಪರಾರಿಯಾಗಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ ಪರಿಣಾಮ ಪೊಲೀಸರು ಆತನನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತನನ್ನು ಮೈಸೂರು ಅಗ್ರಹಾರದ ನಿವಾಸಿ, ಇದೀಗ ಗೋಕುಲಂನಲ್ಲಿ ವಾಸವಿರುವ ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ. ಈತ ಜನವರಿ 23ರಂದು ಗೋಕುಲಂನಲ್ಲಿರುವ ವಿಜಯಾ ಬ್ಯಾಂಕ್ ಗೆ ಬಂದು ಅಲ್ಲಿನ ಸಿಬ್ಬಂದಿ ಗುರುಪ್ರಸಾದ್ ಎಂಬವರು ಹೊರಗಿರಿಸಿದ್ದ 40ಸಾವಿರ ರೂ.ಮೌಲ್ಯದ ಮೊಬೈಲ್ ನ್ನು ತನ್ನ ಜೇಬಿಗಿಳಿಸಿದ್ದಾನೆ. ಈ ಕೃತ್ಯ ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಪರಿಶೀಲಿಸಿದಾಗ ಗಮನಕ್ಕೆ ಬಂದಿದೆ. ಕೂಡಲೇ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿವಿಪುರಂ ಠಾಣೆಯ ಇನ್ಸಪೆಕ್ಟರ್ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

Leave a Reply

comments

Related Articles

error: