ಕರ್ನಾಟಕ

ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ತರಬೇತಿ: ಸದುಪಯೋಗಕ್ಕೆ ಮನವಿ

ಮಂಡ್ಯ (ಮೇ 17): ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ಮಳವಳ್ಳಿ ವತಿಯಿಂದ ಜೂನ್ 13 ರಿಂದ 15 ರವರೆಗೆ ಹೈನುಗಾರಿಕೆ ತರಬೇತಿಯನ್ನು ಮತ್ತು ಜೂನ್ 27 ರಿಂದ ಜೂನ್ 29 ರವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತಿ ಇರುವವರು ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆಗೆ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ, ಸರ್ಕಾರಿ ಕೋಳಿ ಫಾರಂ ಪಕ್ಕ, ಮೈಸೂರು ರಸ್ತೆ, ಮಳವಳ್ಳಿ ಹಾಜರಾಗಲು ತಿಳಿಸಿದೆ. ತರಬೇತಿಗೆ ಯಾವುದೇ ಶುಲ್ಕವಿರುವುದಿಲ್ಲ ಮತ್ತು ತರಬೇತಿ ಅವಧಿಯಲ್ಲಿ ಉಪಾಹಾರ/ಭೋಜನ,ವಸತಿ ವ್ಯವಸ್ಥೆ ಅಥವಾ ಭತ್ಯೆ ಲಭ್ಯವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08231- 244233 ಸಂಪರ್ಕಿಸಲು ಪ್ರಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: