ಮೈಸೂರು

ಮೇ.24 : ಗಾನಭಾರತಿಯಲ್ಲಿ ಯುವ ಪ್ರತಿಭಾ ಸಂಜೆ

ಮೈಸೂರು,ಮೇ.18:- ಕುವೆಂಪು ನಗರದಲ್ಲಿರುವ  ಗಾನಭಾರತೀಯಲ್ಲಿ ಮೇ 24ರಂದು ಸಂಜೆ 6 ಗಂಟೆಗೆ ಇಬ್ಬರು ಯುವ ಪ್ರತಿಭಾವಂತ ಕಲಾವಿದರ ಸಂಗೀತಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 6ರಿಂದ 7:30ವರೆಗೆವಿದುಷಿ ಕೃತ್ತಿಕಾ ಶ್ರೀನಿವಾಸನ್‍ ಅವರು ಹಾಗೂ 7.30ರಿಂದ 9ರವರೆಗೆ ವಿದ್ವಾನ್ ಕೆ ವಿ ಕೃಷ್ಣಪ್ರಸಾದ್‍ಗಾಯನಕಾರ್ಯಕ್ರಮ ನೀಡಲಿದ್ದಾರೆ. ಅವರಿಗೆವಿದುಷಿ ಶ್ರುತಿ ಅವರು ಪಿಟೀಲಿನಲ್ಲಿ ಹಾಗೂ ವಿದ್ವಾನ್ ಎಂ ಆರ್ ಮಂಜುನಾಥ್‍ ಅವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.
ವೃತ್ತಿಯಲ್ಲಿಇಂಜಿನಿಯರ್‍ಆಗಿರುವಕೃತ್ತಿಕಾ ಶ್ರೀನಿವಾಸನ್‍ಚಿತ್ರವೀಣಾಎನ್‍ರವಿಕಿರಣ್‍ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ವಿದ್ವಾನ್‍ ಅನೂರು ಅನಂತ ಕೃಷ್ಣ ಶರ್ಮ ಅವರಲ್ಲೂ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವಇವರು ಹಲವು ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿ ಸಭಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಷಯಾಧಾರಿತ ಕಾರ್ಯಕ್ರಮಗಳನ್ನು ನೀಡು ವುದರ ಮೂಲಕ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
ವಿದ್ವಾನ್‍ಕೃಷ್ಣಪ್ರಸಾದ್ ವಿದ್ವಾನ್‍ಆರ್ ಕೆ ಪದ್ಮನಾಭಅವರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಹಲವಾರು ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿರುವಇವರುಉತ್ತಮ ಸಂಘಟಕರೂ ಹೌದು. ಎನ್‍ಆರ್ ಕಾಲೋನಿ ರಾಮಮಂದಿರ ಮೊದಲಾದ ಹಲವು ಸಂಘಟನೆಗಳನ್ನು ಸಕ್ರಿಯವಾಗಿ ಮುನ್ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಹಾಗೂ ಸಂಸ್ಕೃತದಲ್ಲಿ ರಚಿಸಿದ್ದಾರೆ. ನಾದಜ್ಯೋತಿ, ಸಂಗೀತ ವಿಶಾರದ, ಅನನ್ಯಯುವ ಪುರಸ್ಕಾರ ಮೊದಲಾದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಕುರಿತಂತೆ ವಿದ್ಯಾರ್ಥಿಗಳಿಗಾಗಿ ಕಾರ್ಯಗಾರ ನಡೆಸಿದ್ದಾರೆ.
ವಿದುಷಿ ಶ್ರುತಿ ಭರವಸೆ ಮೂಡಿಸಿರುವ ಯುವ ವಯೋಲಿನ್ ಕಲಾವಿದೆ. ವಿದ್ವಾನ್‍ಎಚ್ ಕೆ ನರಸಿಂಹಮೂರ್ತಿಯವರಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ವಿದ್ವಾನ್ ಎಂ ಆರ್ ಮಂಜುನಾಥ್‍ಅವರುತಮ್ಮತಂದೆ ವಿದ್ವಾನ್‍ರಾಜಪ್ಪನವರ ಶಿಷ್ಯರು. ಲಯವಾದನದಲ್ಲಿಮುಂಚೂಣಿಯಲ್ಲಿರುವಕಲಾವಿದರು. ಹಿರಿಯಕಿರಿಯರಿಗೆಲ್ಲಾ ಲಯ ವಾದ್ಯ ಸಹಕಾರ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: