ಕರ್ನಾಟಕಪ್ರಮುಖ ಸುದ್ದಿ

ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಹಾಸನ (ಮೇ 18): ನಗರದ ಕೃಷಿಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ, ಆಲೂಗಡ್ಡೆ ಬಿತ್ತನೆ ಬೀಜ ವಿತರಣೆ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸೀಸ್ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿನ ಆಲೂಗಡ್ಡೆ ಬೆಳೆಯುವ 15.000 ಎಕರೆ ಭೂಮಿಗೆ ಅವಶ್ಯಕವಿರುವ 20 ಸಾವಿರ ಮೆಟ್ರಿಕ್ ಟನ್ ಬಿತ್ತನೆ ಬೀಜವನ್ನು ಶಿತಲಗೃಹದಲ್ಲಿ ಈಗಾಗಲೇ ಶೆಕರಿಸಿಡಲಾಗಿದೆ ಅಲ್ಲದೆ ಬೇರೆ ಜಿಲ್ಲೆಯಲ್ಲಿ ಆಗಮಿಸುವ ರೈತರಿಗೂ ಬಿತ್ತನೆ ಬೀಜ ವಿತರಿಸಲು ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ವರ್ತಕರು ಈಗಗಲೇ 8.200 ಚೀಲ ಆಲೂಗಡ್ಡೆಯನ್ನು ಪ್ರಾರಂಭಿಕವಾಗಿ ಮಾರುಕಟ್ಟೆಗೆ ತಂದಿದ್ದು ಬೇಡಿಕೆಗೆ ಅನುಗುಣವಾಗಿ ವರ್ತಕರು ಬಿತ್ತನೆ ಬೀಜಗಳನ್ನು ಪೂರೈಸಲು ಸಿದ್ದರಿದ್ದಾರೆ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ರೈತರು ಖರೀದಿಸಿದ ಬಿತ್ತನೆ ಬೀಜಕ್ಕೆ ಕಡ್ಡಾಯವಾಗಿ ರಶೀದಿಗಯನ್ನು ಪಡೆಯಬೇಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಲು ಎ.ಪಿ.ಎಂ.ಸಿ ಆವರಣದಲ್ಲೇ ನೋಂದಣಿ ಕಾರ್ಯ ಕೈಗೊಳ್ಳಲಿದ್ದು ರೈತರು ಬಿಲ್ಲಿನೊಂದಿಗೆ ಆದಾರ್ ಕಾರ್ಡ್, ಪಹಣಿ, ಪಾಸ್ಬುಕ್, ಜಾತಿ ಪ್ರಮಾನಪತ್ರ ಪೋಟೋಗಳೋಂದಿಗೆ ನೋಂಣಿ ಮಾಡಿಸಿದಲ್ಲಿ ಶೇ 50% ರಷ್ಟು ಸಬ್ಸಿಡಿ ಹಣ ಔಷದಿಗಳನ್ನು ನೀಡಲಾಗುವುದು ಎಂದರು.

ಇಂದು ಪ್ರಾರಂಭದ ದಿನವಾಗಿರುವುದರಿಂದ ಹಾಗೂ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇಲ್ಲ ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣವನ್ನಾದರಿಸಿ ಹೆಚ್ಚು ಬೇಡಿಕೆಯ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಹಾಗೂ ಸಂಚಾರ ದಟ್ಟಣೆ ಯಾಗದಂತೆ ಪೋಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ. ಚೇತನ್ ಸಿಂಗ್ ರಾಥೋಡ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಕೃಷಿ ಉತ್ಪನ್ನ ಮಾರುಕಟ್ಟೆ ಇಳಖೆಯ ಶ್ರೀಹರಿ ಮತ್ತಿರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: