ಮೈಸೂರು

ಮಾತಾಡುತ್ತ ನಿಂತಿದ್ದಾಗ ಮೊಬೈಲ್ ಕಸಿದು ಪರಾರಿ

ಮೈಸೂರು,ಮೇ.18:- ಬೈಕಿನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲಿ ಮಾತನಾಡುತ್ತ ನಿಂತಿದ್ದ ವ್ಯಕ್ತಿಯ ಮೊಬೈಲ್ ಫೋನ್ ಕಿತ್ತುಕೊಂಡುಪರಾರಿಯಾದ ಘಟನೆ ಬಿ.ಬಿ.ಮಿಲ್ ರಸ್ತೆಯಲ್ಲಿ ನಡೆದಿದೆ.

ಬಿ.ಬಿ.ಮಿಲ್ ರಸ್ತೆಯ ಜೆ.ಎನ್.ಸ್ಟಾರ್ ಅಲ್ಯುಮಿನಿಯಂ ಪಾತ್ರೆ ಅಂಗಡಿಯ ಉದ್ಯೋಗಿ ಶ್ರೀನಿವಾಸ್  ಎಂಬವರೇ ಮೊಬೈಲ್ ಕಳೆದುಕೊಂಡವರು. ಇವರ    11.30 ುಕೆಲಸಮುಗಿಸಿರಾತ್ರಿಕ್ಕೆ ಬಿ.ಬಿ.ಮಿಲ್ ರಸ್ತೆಯ ಗಣಪತಿ ದೇವಸ್ಥಾನದ  ಹತ್ತಿರ ಮೊಬೈಲ್ ನಲ್ಲಿ ಮಾತನಾಡುತ ್ತನಿಂತಿದ್ದಾಗ ಯಾರೋ ದುಷ್ಕರ್ಮಿಗಳು  ಬೈಕಿನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ.

ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: