ಸುದ್ದಿ ಸಂಕ್ಷಿಪ್ತ

ಮದ್ಯ ಮಾರಾಟ ನಿಷೇಧಿಸಿ ಆದೇಶ

ಮಂಡ್ಯ (ಮೇ 18): ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಮತ ಎಣಿಕೆ ಮೇ 23 ರಂದು ನಡೆಯಲ್ಲಿದ್ದು ಸದರಿ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 135 ಸಿರ ರೀತ್ಯಾ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮ 1967ರ ನಿಯಮ 10 (ಬಿ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೇ 22 ರ ಮಧ್ಯರಾತ್ರಿಯಿಂದ ಮೇ 23 ರ ಮಧ್ಯರಾತ್ರಿಯವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಬರುವ ಎಲ್ಲಾ ತರಹದ ಮದ್ಯದ ಅಂಗಡಿ/ ಬಾರ್ ಅಂಡ್ ರೆಸ್ಟೋರೆಂಟ್/ ಕ್ಲಬ್‍ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದು ಈ ಅವಧಿಯಲ್ಲಿ ಮದ್ಯ ಮಾರಾಟ, ಹಂಚಿಕೆ, ಸಾಗಣಿಕೆ ಮತ್ತು ಶೇಖರಣೇಯನ್ನು ನಿಷೇಧಿಸಿ “ ಪಾನ ನಿರೋಧ” ದಿನವೆಂದು ಘೋಷಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಪಿ.ಸಿ.ಜಾಫರ್ ಅÀವರು ಆದೇಶಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: