ಮೈಸೂರು

ಪ್ರೇಕ್ಷಕರ ಮನ ತಣಿಸಿದ ಧ್ವನಿ-ಬೆಳಕು ಕಾರ್ಯಕ್ರಮ

ಭಾರತದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಗಾಥೆಯನ್ನು ಕಟ್ಟಿ ಕೊಡುವ ಧ್ವನಿ-ಬೆಳಕು ಕಾರ್ಯಕ್ರಮ ಪ್ರೇಕ್ಷಕರ ಮನತಣಿಸಿತು.

ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದ ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾದ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ಕಾರ್ಯಕ್ರಮ ನೋಡುಗರ ಮನಮುಟ್ಟಿದರೂ ಕೆಲವೊಂದು ಗೊಂದಲ ಹಾಗೂ ಅಪ್ರಸ್ತುತ ಸನ್ನಿವೇಶವನ್ನು ಅಳವಡಿಸಿದ್ದರಿಂದ ಆಯೋಜಕರು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದರು.

ಅಂಬೇಡ್ಕರ್ ಬಾಲ್ಯ, ವಿದ್ಯಾಭ್ಯಾಸ, ದಲಿತ ವಿರೋಧಿ ನೀತಿ – ಅಸ್ಪೃಶ್ಯತೆಯ ಝಳದಿಂದ ಜೀವನದ ಮೇಲಾದ ದುಷ್ಪರಿಣಾಮ ಹಾಗೂ ಅದರಿಂದಾದ ಬದಲಾವಣೆಯನ್ನು ಎಳೆ-ಎಳೆಯಾಗಿ ವಿವರಿಸುತ್ತಾ ಸಾಗುವ ಕಥೆಯು ಡಾ.ಬಾಬಾ ಸಾಹೇಬ್ ಅವರ ಜೀವನದ ವಿವಿಧ ಮಜಲುಗಳನ್ನು ಕಲಾವಿದರು ಸೈ ಎನ್ನಿಸುವ ಮಟ್ಟಿಗೆ ರಂಗದ ಮೇಲೆ ಮೂಡಿಸಿದರು.

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪರಿಕಲ್ಪನೆಯಲ್ಲಿ, ಬಿ.ಎಂ.ಗಿರಿರಾಜ್ ನಿರ್ದೇಶನ ಮತ್ತು ಸಾಹಿತ್ಯದೊಂದಿಗೆ, , ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್ ಅವರ ಗೀತರಚನೆಯ, ಶಶಿಧರ ಅಡಪ ರಂಗವಿನ್ಯಾಸದ, ಪ್ರಮೋದ್ ಶಿಗ್ಗಾವಿ ವಸ್ತಾಲಂಕಾರದಲ್ಲಿ, ಎಂ.ಪಿ.ಎಂ.ವೀರೇಶ್ ಸಹ ನಿರ್ದೇಶನದ, ಪದ್ಮಿನಿ ಅಚ್ಚಿ ನೃತ್ಯ ಸಂಯೋಜನೆಯಲ್ಲಿ ಮಾಡಲಾದ ರೂಪಕವು ಸೊಗಸಾಗಿ ಮೂಡಿಬಂತು.

Leave a Reply

comments

Related Articles

error: