ಮೈಸೂರು

ವಿಶ್ವ ದಾಖಲೆಯತ್ತ ಯೋಗ ಚಿತ್ತ : ಅಂತರರಾಷ್ಟ್ರೀಯ ಯೋಗ ದಿನಕ್ಕೆ ವಿಶ್ವ ದಾಖಲೆ ನಿರ್ಮಿಸಲು ಯೋಗಾಸಕ್ತರ ಪಣ

ಮೈಸೂರು,ಮೇ.19:- ಪತಂಜಲಿ ಯೋಗಸಮಿತಿ ಮತ್ತು ಭಾರತ್ ಸ್ವಾಭಿಮಾನ ಟ್ರಸ್ಟ್ ನ ವತಿಯಿಂದ ಮೈಸೂರಿನ ವಿಜಯನಗರದ ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮದಲ್ಲಿ ಇಂದು ಯೋಗ ಪೂರ್ವಾಭ್ಯಾಸ  ನಡೆಯಿತು.

ವಿಶ್ವ ದಾಖಲೆಯತ್ತ ಯೋಗ ಚಿತ್ತ ಹೊರಳಿದ್ದು, ಅಂತರರಾಷ್ಟ್ರೀಯ ಯೋಗ ದಿನಕ್ಕನುಗುಣವಾಗಿ ಪೂರ್ವ ಅಭ್ಯಾಸದಲ್ಲಿ   ಆಸಕ್ತರು ತೊಡಗಿದ್ದರು.  ದೇಶದ ಘನತೆಯನ್ನು  ವಿಶ್ವಮಟ್ಟದಲ್ಲಿ ಹೆಚ್ಚಿಸಿರುವ ಹಾಗೂ ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಯೋಗವು ಅಂತರರಾಷ್ಚ್ರೀಯ ಮಟ್ಟದಲ್ಲಿ ಮಹತ್ವ ಗಿಟ್ಟಿಸಿ ವಿಶ್ವವೇ ಒಮ್ಮೆ ಇತ್ತ ತಿರುಗಿ ನೋಡುವಂತಹ ಇತಿಹಾಸವನ್ನು  ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಬರೆದು ಮೆರೆದಿದೆ.

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವಾಗಿದ್ದು ಆ ದಿನ ರೈಸ್ ಕೋರ್ಸ್ ಮೈದಾನದಲ್ಲಿ 1.50 ಲಕ್ಷಕ್ಕೂ ಹೆಚ್ಚು ಯೋಗಾಸಕ್ತರು ಸಾಮೂಹಿಕವಾಗಿ ಸೇರಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಪಣ ತೊಟ್ಟಿದ್ದಾರೆನ್ನಬಹುದಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಡಳಿತ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು,ಜಿಲ್ಲಾ ಪತಂಜಲಿ ಸಂಸ್ಥೆಯ ಮುಖ್ಯಸ್ಥರುಗಳು,ವಿವಿಧ ಯೋಗ ಸಂಘಟನೆಗಳು

ಹಾಗೂ ನಾಗರಿಕರು ಶಕ್ತಿ ಮೀರಿ ಪ್ರಯತ್ನಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ನೀತಿ ನಿಯಮನುಸಾರ ಪೂರ್ವಾಭ್ಯಾಸ  

ಅಂತರ ರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದ ಮಾನಸ ಸರೋವರ ಪುಷ್ಕರಿಣಿ ವಿದ್ಯಾಶ್ರಮ ಸೇರಿದಂತೆ ಹಲವಾರು ಯೋಗ ಶಿಬಿರಗಳಲ್ಲಿ ಯೋಗ ಪೂರ್ವಾಭ್ಯಾಸ ಜರುಗಿದ್ದು ಒಂದೇ ರೀತಿಯ ಯೋಗಾಸನಗಳನ್ನ ನಿಯೋಜಿಸಲು ನಿಯಮಾನುಸಾರ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಪೂರ್ವಾಭ್ಯಾಸವೂ ಸಹ ನಿಯಮಾನುಸಾರವಾಗಿಯೇ ಜರುಗಿತು.

ಮೊದಲಿಗೆ ಪ್ರಾರ್ಥನೆ,ಚಾಲನಾ ಕ್ರಿಯೆ,ಆಸನಗಳು,ಪ್ರಾಣಾಯಾಮ,ಧ್ಯಾನ ಮತ್ತು ಸಂಕಲ್ಪದೊಂದಿಗೆ ಪೂರ್ವಾಭ್ಯಾಸ ಕ್ರಿಯೆ ಅಂತಿಮಗೊಂಡಿತು.

ಪೂರ್ವಾಭ್ಯಾಸ ಯೋಗ ಕುರಿತು ಮಾತನಾಡಿದ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ಮುಖ್ಯಸ್ಥೆ  ಕಲಾವತಿ   ‘ಯೋಗ’ ಶಬ್ದ ಸಂಸ್ಕೃತ ಭಾಷೆಯ ‘ಯುಜ್’ ಎಂಬ ಪದದಿಂದ ಆಗಿದೆ. ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಆರ್ಥ ಬರುತ್ತದೆ. ಯೋಗವೆಂದರೆ ‘ಉಪಾಯ’ ‘ಸಾಧನ’ ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು ,ಬುದ್ದಿ ,ಭಾವನೆ,ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ.

ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ.  ಪತಂಜಲಿ ಮಹರ್ಷಿಗಳು ಯೋಗ ಎಂದರೆ

“ಯೋಗಶ್ಚಿತ್ತ ವೃತ್ತಿ ನಿರೋಧ” ಎನ್ನುತ್ತಾರೆ. ಯೋಗವು ಭಾರತೀಯ ತತ್ವಜ್ಞಾನದ ಮೂಲವಾಗಿದ್ದು ಆರು ಸಾಂಪ್ರದಾಯಿಕ ಶಾಖೆಗಳನ್ನೊಳಗೊಂಡು ದೇಶದ ಜನರ ಹಿತ ಕಾಯುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಮಾನವ ಧರ್ಮದ ಮೂಲಭೂತ ಸೈದ್ಧಾಂತಿಕ ಪ್ರತಿಪಾದನೆಯನ್ನು ನೀಡುತ್ತಾ ಬಂದಿದೆ.

ಪತಂಜಲಿಯು ಯೋಗಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಾ ಬಂದಿದ್ದು ದೇಶಾದ್ಯಂತ ‘ಪತಂಜಲಿ’ ಯೂ ಸಹ ತನ್ನ ಅಸ್ತಿತ್ವದ ಜೊತೆ ಯೋಗದ ಅಸ್ತಿತ್ವವನ್ನೂ ಕಾಪಾಡಿಕೊಂಡು ಮುನ್ನೆಡೆಯುತ್ತಿದೆ ಎಂದರು.

 

ಜೂನ್ 21 ರಂದು ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ   ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜನರಲ್ಲಿ ಯೋಗದ ಜಾಗೃತಿ ಮೂಡಿಸುವಲ್ಲಿ   ಪ್ರಮುಖ ಪಾತ್ರ ವಹಿಸಬೇಕೆಂದು ಪೂರ್ವಾಭ್ಯಾಸದಲ್ಲಿ ತೊಡಗಿದ್ದ ಯೋಗಭ್ಯಾಸಕ್ತರಲ್ಲಿ ಹಾಗೂ  ಗಣ್ಯರಲ್ಲಿ ವಿನಂತಿಸಿದರು.

 

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಸುಬ್ಬಯ್ಯ ,ಪತಂಜಲಿ ಯೋಗಸಮಿತಿ ಮುಖ್ಯಸ್ಥ ದೇವಯ್ಯ,ಫರ್ನೀಚರ್ ಇಂಡಸ್ಟ್ರೀಯಲಿಸ್ಟ್ ಎಸ್.ಆರ್ ರಘುರಾಂ ಶೆಟ್ಲೂರ್,ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: