ಪ್ರಮುಖ ಸುದ್ದಿ

ನಾಪೋಕ್ಲುವಿನಲ್ಲಿ ಆಟ್ ಪಾಟ್ ಪಡಿಪು ಸಮಾರೋಪ : ಮನೆಯಿಂದಲೇ ಸಂಸ್ಕೃತಿ ಉಳಿಸಿ, ಬೆಳೆಸಿ : ಬೊಳ್ಳಜಿರ ಬಿ.ಅಯ್ಯಪ್ಪ ಕರೆ

ರಾಜ್ಯ(ಮಡಿಕೇರಿ) ಮೇ 19 :- ಕೊಡಗಿನ ಸಂಸ್ಕೃತಿ , ಆಚಾರ, ವಿಚಾರ, ಪದ್ಧತಿಯನ್ನು ಹಿರಿಯರು ಮಕ್ಕಳಿಗೆ ಮನೆಯಿಂದಲೇ ಕಲಿಸಿದರೆ ಅದು ಉಳಿಯಲು ಸಾಧ್ಯ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಾಪೋಕ್ಲು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಆಟ್‍ಪಾಟ್ ಪಡಿಪು ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕೊಡವ ಭಾಷೆಯನ್ನು ಬೆಳೆಸಲು ಹಿರಿಯರು ಮಕ್ಕಳಿಗ ಒತ್ತಾಸೆಯನ್ನು ನೀಡಬೇಕೆಂದ ಅವರು ಮಕ್ಕಳು ತಪ್ಪು ದಾರಿ ಹಿಡಿಯಲು ಪೋಷಕರು ಸಹ ಕಾರಣಾರಾಗುತ್ತಾರೆ ಏಕೆಂದರೆ ಮಕ್ಕಳ ಮೇಲಿನ ಹೆಚ್ಚಿನ ಮಮತೆ ಅವರನ್ನು ಖಿನ್ನರನ್ನಾಗಿಸುತ್ತದೆ ಆದುದರಿಂದ ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತವರಣದಲ್ಲಿ ಒಳ್ಳೆಯ ಗುಣ ನಡತೆ ಬಗ್ಗೆ ತಿಳಿಹೇಳ ಬೇಕೆಂದರು. ಯಾವುದೆ ಮನುಷ್ಯನಗಲಿ, ಪ್ರಾಣಿಯಾಗಲಿ ಚಿಕ್ಕಂದಿನಿಂದಲೇ ಅವರಿಗೆ ಒಳ್ಳೆಯದನ್ನು ಕಲಿತರೇ ಅದು ಕೊನೆಯವರೆಗೂ ಉಳಿಯಲು ಸಾಧ್ಯ, ಮಕ್ಕಳಿಗೆ ಸಂಸ್ಕ್ರತಿ ಮಂದ್ ಮಾನಿಯ ಬಗ್ಗೆ ಹಿರಿಯರು ತಿಳಿ ಹೇಳಬೇಕೆಂದ ಅವರು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಅವರನ್ನು ತಿದ್ದಲು ಸಾದ್ಯವಿಲ್ಲ ಇದನ್ನು ಪ್ರತಿಯೊಬ್ಬರೂ ಅರಿಯ ಬೇಕೆಂದರು. ಯಾವುದೇ ಒಂದು ಸ್ವರ್ಧೆಯಲ್ಲಿ ಬಹುಮಾನ ಗಳಿಸಲು ಮಾತ್ರ ಭಾಗವಹಿಸುವುದು ಸರಿಯಲ್ಲ ಅವಕಾಶಗಳು ಸಿಗುವಾಗ ಅದನ್ನು ಬಳಸಿಕೊಂಡು ಮುಂದೆ ಬರಬೇಕೆಂದು ಹೇಳಿದರು. ನಮ್ಮ ಮಕ್ಕಳು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಅಂತಹ ಸಾಧಕರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದ ಅವರು ಕೊಡವ ಮಕ್ಕಡ ಕೂಟವು ಇಂದು ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದೆ ಮುಂದೆ ಇದನ್ನು ಮುಂದು ವರೆಸಿಕೊಂಡು ಹೋಗಲಾಗುವುದು ಎಂದರು.
ಈ ಸಂದರ್ಭ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ “ ಹಣ್ಣೆಲೆ ಚಿಗುರೆಲೆ ಪುಸ್ತಕವನ್ನು ಗಣ್ಯರು (ಬಿಡುಗಡೆ) ಉದ್ಘಾಟಿಸಿದರು. ನಂತರ ಮಾತನಾಡಿದ ಉಳುವಂಗಡ ಕಾವೇರಿ ಉದಯ ನನ್ನ ಎರಡು ಪುಸ್ತಕವನ್ನು ಇಲ್ಲಿ ಬಿಡುಗಡೆಗೊಳಿಸಲು ಸಹಕರಿಸಿ ಕೊಡವ ಮಕ್ಕಟ ಕೂಟದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಪುಸ್ತಕ ರಚಿಸಲು ಹಣದ ಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಭಾರತೀಯ ಹಾಕಿ ಕ್ಯಾಂಪ್‍ಗೆ, ಆಯ್ಕೆಯಾದ ಕುಂಡ್ಯೋಳಂಡ ಕಾರ್ಯಪ್ಪ, ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಕೆಲೇಟಿರ ಹರ್ಷಿತ, ಪೆನ್ಸಿಂಗ್ ಚಾಂಪಿಯನ್ ಕೈಬುಲೀರ ಕುಟ್ಟಪ್ಪ ಮತ್ತು ಥ್ರೋಬಾಲ್ ಆಟಗಾರ್ತಿ ಬೊಪ್ಪಂಡ ರೀನಾರವರನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಕುಂಡ್ಯೋಳಂಡ ಕಾರ್ಯಪ್ಪ ಪರ ಅವರ ತಂದೆ ತಿಮ್ಮಯ್ಯ ಮತ್ತು ಕೆಲೇಟಿರ ಹರ್ಷಿಕ ಪರ ಅವರ ತಾಯಿ ಮಾಲ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೊಂಡೀರ ನಾಣಯ್ಯ, ಉಧ್ಯಮಿ, ಅರೆಯಡ ಪವಿನ್ ಪೊನ್ನಣ್ಣ, ಸನ್ಮಾನ ಸ್ವೀಕರಿಸಿದ ಬೊಪ್ಪಂಡ ರೀನಾ ಮತ್ತು ಉಮ್ಮತ್ತಾಟ್ ತರಬೇತುದಾರರಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಮಾತನಾಡಿದರು.
ಮಕ್ಕಳಿಂದ ಬೊಳ್‍ಕಾಟ್, ಕೋಲಾಟ್, ಉಮ್ಮತ್ತಾಟ್, ದುಡಿಕೊಟ್ಟ್ ಪಾಟ್, ಪರೆಯಕಳಿ, ತಾಲಿಪಾಟ್ ಪ್ರದರ್ಶನ ನಡೆಯಿತು. ತರಬೇತುದಾರಗಾಗಿ, ಕಂಗಾಂಡ ಜಾಲಿ ಪೂವಪ್ಪ, ಚಿಯಕಪೂವಂಡ ದೇವಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬೊಳ್ಳಂಡ ದೇವಿ ದೇವಯ್ಯ, ಕಾರ್ಯನಿರ್ವಹಿಸಿದ್ದರು. ಇವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯರಾದ ಕುಲ್ಲೇಟಿರ ಮಾದಪ್ಪ, ಅರೆಯಡ ಸೋಮಪ್ಪ, ಆರ್,ಎಂ,ಸಿ, ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೊಡವ ಸಮಾಜದ ಕಾರ್ಯದರ್ಶಿ ಮತ್ತು ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ, ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಬಾಳೇಯಡ ಪ್ರತೀಸ್ ಪೂವಯ್ಯ, ಪಾಂಡಂಡ, ತುಳಸಿ ಸೋಮಣ್ಣ, ಬಾಳೆಯಡ ದಿವ್ಯಾ ಮಂದಪ್ಪ, ಚೆಟ್ಟಿಯಾರಂಡ ದೀಪಿಕ ಮುತ್ತಣ್ಣ, ಮತ್ತಿತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: