ಮೈಸೂರು

ಮೃಗಾಲಯಕ್ಕೆ ಆಗಮಿಸಲಿವೆ ಹೊಸ ಅತಿಥಿಗಳು

ಮೈಸೂರಿನ ಅಂತಾರಾಷ್ಟ್ರೀಯ ಸುಪ್ರಸಿದ್ಧ ಮೃಗಾಲಯಕ್ಕೆ ಕಳೆದೊಂದು ತಿಂಗಳಿಂದ ಆವರಿಸಿದ್ದ ಹಕ್ಕಿ ಜ್ವರದ ಭೀತಿಯ ಕಾರ್ಮೋಡ ಸರಿದಿದ್ದು, ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿಯೂಂದು ಹೊರಬಿದ್ದಿದೆ.

ಮೃಗಾಲಯವು ಪ್ರಾಣಿಗಳ ವಿನಿಮಯ ಒಪ್ಪಂದದಡಿ ಹೊಸಪ್ರಾಣಿಗಳನ್ನು ಸೇರ್ಪಡೆಗೊಳಿಸುತ್ತಿದ್ದು ಶ್ರೀಲಂಕಾದ ಆರು ಆನಕೊಂಡ, ತಮಿಳುನಾಡಿನ ಸಿಂಗಳೀಕ ಹಾಗೂ ಗುಜರಾತ್‍ನ ಸಿಂಹವೊಂದು ಕೆಲವೇ ದಿನಗಳಲ್ಲಿ ಮೃಗಾಲಯಕ್ಕೆ ಪಾದಾರ್ಪಣೆ ಮಾಡಲಿದೆ. ಅನಕೊಂಡ ಹಾಗೂ ಹೆಬ್ಬಾವುಗಳನ್ನು ಪಾಲಿಸುತ್ತಿರುವ ದೇಶದ ಮೊಟ್ಟಮೊದಲ ಮೃಗಾಲಯ ಎನ್ನುವ ಕೀರ್ತಿಗೆ ಮೈಸೂರು ಮೃಗಾಲಯ ಪಾತ್ರವಾಗಿದೆ.

Leave a Reply

comments

Related Articles

error: