ಮೈಸೂರು

ಶೂಟೌಟ್ ಪ್ರಕರಣ : ವಿಜಯನಗರ ಠಾಣೆ ಇನ್ ಸ್ಪೆಕ್ಟರ್ ಬಿ.ಜೆ ಕುಮಾರ್ ವರ್ಗಾವಣೆ

ಮೈಸೂರು,ಮೇ.19:-  ನಗರದ ಶೂಟೌಟ್ ಪ್ರಕರಣ ಸಂಬಂಧ ವಿಜಯನಗರ ಠಾಣೆ ಇನ್ ಸ್ಪೆಕ್ಟರ್ ಬಿ.ಜೆ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ನೋಟು ಅಮಾನಿಕರಣ ದಂಧೆ ನಡೆಸುತ್ತಿದ್ದ ಗುಂಪೊಂದರ ಮೇಲೆ ಕಳೆದ ಗುರುವಾರ ಗುಂಡಿನ ದಾಳಿ ನಡೆಸಲಾಗಿತ್ತು. ಆ ವೇಳೆ ಇನ್ ಸ್ಪೆಕ್ಟರ್ ಬಿ.ಜೆ ಕುಮಾರ್ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಎಂ ನೀಲಮಣಿ ರಾಜು, ಬೆಂಗಳೂರಿನ ಪೊಲೀಸ್ ಕೇಂದ್ರ ಕಚೇರಿಗೆ ಕುಮಾರ್  ಅವರನ್ನು  ವರ್ಗಾವಣೆ  ಮಾಡಿ ಆದೇಶ ಹೊರಡಿಸಿದ್ದಾರೆ. ಡಿವೈಎಸ್ ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತನಿಖೆ ದಳ ನಗರಕ್ಕೆ ಬಂದಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದೆ.
ಪಂಜಾಬ್ ನಿಂದ ಬಂದ ಸುಕ್ವಿಂದರ್ ಸಂಬಂಧಿಕರಾದ ಮುಕ್ಸಾರ್ ಸಾಹಿಬ್ ಜಿಲ್ಲೆಯ ಬುರಾಗುಜ್ಜರ್ ಗ್ರಾಮದ ಗುರುಮೀತ್ ಸಿಂಗ್, ಹರಜಿಂದರ್ ಸಿಂಗ್ ಹಾಗೂ ಅರ್ವಿಂದರ್ ಪಾಲ್ ಸಿಂಗ್ ಅವರಿಂದ 5ನೇ ಹೆಚ್ಚುವರಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಭೀಮಪ್ಪ ಎಸ್. ಪಾಲ್ ಹೇಳಿಕೆ ಪಡೆದುಕೊಂಡಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಆರೋಪಿ ಸುಕ್ವಿಂದರ್ ಸಿಂಗ್ ಮರಣೋತ್ತರ ಪರೀಕ್ಷೆ ನಿನ್ನೆ ಪೊಲೀಸ್ ಸರ್ಪಗಾವಲಿನಲ್ಲಿ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: