ಮೈಸೂರು

ಅಂಗಡಿ ಮುಂದೆ ಗಾಡಿ ನಿಲ್ಲಿಸಿದ ವಿಚಾರ : ಎರಡು ಕೋಮಿನ ನಡುವೆ ಸಂಘರ್ಷ, ವಾಹನ ಪುಡಿ ; ಪೊಲೀಸ್ ಬಂದೋಬಸ್ತ್

ಮೈಸೂರು,ಮೇ.20:-  ಅಂಗಡಿ ಮುಂದೆ ಗಾಡಿ ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ನಡುವೆ ಸಂಘರ್ಷಕ್ಕೆ ಕಾರಣವಾದ ಘಟನೆ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ಒಂದು ಕೋಮಿನವರು, ಇನ್ನೊಂದು ಕೋಮಿನವರ ಅಂಗಡಿಯ ಮುಂದೆ ವಾಹನ ನಿಲ್ಲಿಸಿದ್ದೇ ಸಂಘರ್ಷಕ್ಕೆ ಕಾರಣವಾಗಿದ್ದು, ಪ್ರಕರಣ ಮಂಡಿ ಮೊಹಲ್ಲಾ ಠಾಣೆಯ ಮೆಟ್ಟಿಲೇರಿ ಎರಡು  ಎಫ್ ಐ ಆರ್ ದಾಖಲಾಗಿತ್ತು.  ಎಫ್ ಐ ಆರ್ ದಾಖಲಾಗಿದ್ದಕ್ಕೆ ಠಾಣೆಗೆ ಬಂದು ಹೋಗುವಾಗ ಉದ್ರಿಕ್ತಗೊಂಡ ಒಂದು ಕೋಮಿನವರು ಇನ್ನೊಂದು ಕೋಮಿನವರ ಮನೆಯ ಮುಂದೆ ನಿಲ್ಲಿಸಲಾಗಿದ್ದ ವಾಹನಗಳನ್ನು ಪುಡಿಗಟ್ಟಿದ್ದಾರೆ. ವಾಹನ ಹಾನಿಯಾದ್ದರಿಂದ ಕೋಪೋದ್ರಿಕ್ತರಾದ ಮಂದಿ ಹಾಳುಗೈದವರ ವಾಹನಗಳನ್ನು ಪುಡಿಗಟ್ಟಲು ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: