ಮೈಸೂರು

ಅತಿಯಾದ ಮದ್ಯ ಸೇವನೆ : ಯುವಕ ಸಾವು

ಅತಿಯಾದ ಮದ್ಯ ಸೇವನೆಯಿಂದ ಯುವಕನೋರ್ವ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಟಿ.ನರಸೀಪುರ ತಾಲೂಕು ಅಸುವಟ್ಟಿಗೆ ಗ್ರಾಮದ ನಿವಾಸಿ ಭರತ್ (20) ಎಂದು ಗುರುತಿಸಲಾಗಿದೆ.

ಈತ ಮೈಸೂರಿನ ಬಾರ್ ಒಂದರಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಅತಿಯಾಗಿ ಮದ್ಯ ಸೇವಿಸಿ ಆಗ್ರಹಾರದ ಬಳಿ ಈತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: