ಮೈಸೂರು

ಖಾಲಿ ಮನೆಯಲ್ಲಿ ಬೆಂಕಿ: ಆತಂಕಗೊಂಡ ಸ್ಥಳೀಯರು

ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರಾಮಾನುಜ ಮುಖ್ಯರಸ್ತೆಯಲ್ಲಿರುವ ಗೌರಮ್ಮ ಎಂಬವರಿಗೆ ಸೇರಿದ ಮನೆಯೊಂದರಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆ ಆವರಿಸಿತ್ತು. ಗೌರಮ್ಮ ಅವರು 15-20ವರ್ಷಗಳಿಂದ ಆ ಮನೆಯಲ್ಲಿ  ವಾಸವಿರದೇ ಇರುವುದರಿಂದ ಮನೆ ಹಾಗೆಯೇ ಖಾಲಿ ಬಿದ್ದಿತ್ತು. ಮನೆಯ ಹಿಂದುಗಡೆ ಕೆಲವರು ಕಸ ಬೀಸಾಡುತ್ತಿರುವುದರಿಂದ ಮನೆಯೊಳಗೂ ಕಸ ಸೇರಿಕೊಂಡಿತ್ತು ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ನಾಗರಾಜ್ ಅರಸ್ ನೇತೃತ್ವದ ತಂಡ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೋ ಬೀಡಿ ಸೇದಿ ಎಸೆದಿದ್ದು, ಬೆಂಕಿ ಹೊತ್ತಿರಬೇಕೆಂದು ಶಂಕಿಸಲಾಗಿದೆ.

ಕೆ.ಆರ್.ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಕೆ.ಆರ್. ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಸ್ಥಳದಲ್ಲಿ ಕಸ ಎಸೆಯದಿರುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: