Uncategorized

 ಟೈರ್ ಸಿಡಿದು ಲಾರಿ ಪಲ್ಟಿ

ಮೈಸೂರು,ಮೇ.20:-  ಟೈರ್ ಸಿಡಿದು ಲಾರಿ ಪಲ್ಟಿಯಾಗಿರುವ ಘಟನೆ  ಹಿನಕಲ್ ರಿಂಗ್ ರಸ್ತೆ ಬಳಿ  ನಡೆದಿದೆ. ಮೈಸೂರಿನಿಂದ ನಂಜನಗೂಡಿನ ಫ್ಯಾಕ್ಟರಿಯೊಂದಕ್ಕೆ  ಲಾರಿಯಲ್ಲಿ ಕಾಟನ್ ಬಾಕ್ಸ್ ಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಹಿನಕಲ್ ರಿಂಗ್ ರೋಡ್ ಬಳಿ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ  ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ವಿ.ವಿ.ಪುರಂ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: