
ಮೈಸೂರು
ಶೂಟೌಟ್ ಪ್ರಕರಣ ಪ್ರಕರಣ : ವಿಜಯನಗರ ಠಾಣೆಯ ಎಲ್ಲ ಸಿಬ್ಬಂದಿ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯಕ್ತ ಕೆ.ಟಿ.ಬಾಲಕೃಷ್ಣ ಆದೇಶ
ಮೈಸೂರು,ಮೇ.20:- ಮೈಸೂರಿನಲ್ಲಿ ನಡೆದ ಶೂಟೌಟ್ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟೌಟ್ ಗೆ ತೆರಳಿದ್ದ ವಿಜಯನಗರ ಠಾಣೆಯ ಎಲ್ಲ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.
ಮೊನ್ನೆಯಷ್ಟೆ ಶೂಟೌಟ್ ಮಾಡಿದ್ದ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ವರ್ಗಾವಣೆ ಆಗಿತ್ತು. ಇಂದು ಅಕ್ರಮ ದಂಧೆಯ ದಾಳಿಗೆ ತೆರಳಿದ್ದ ಇಡೀ ತಂಡದ ಸಿಬ್ಬಂದಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಎಎಸ್ಐ ವೆಂಕಟೇಶ್ಗೌಡ, ಪೇದೆಗಳಾದ ಮಹೇಶ್, ವೀರಭದ್ರ, ವರ್ಗಾವಣೆ ಮಾಡಲಾಗಿದೆ. ಗರುಡ-13 ವಾಹನದ ಪೇದೆ ಈರಣ್ಣ ಹಾಗೂ ಗರುಡ ಡ್ರೈವರ್ ಪುನಿತ್ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಶೂಟೌಟ್ ನಡೆದ ಸ್ಥಳದಲ್ಲಿದ್ದ ಒಟ್ಟು 6 ಮಂದಿ ವಿಜಯನಗರ ಠಾಣೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಬೆಂಗಳೂರಿಗೆ ವರ್ಗವಣೆ ಮಾಡಲಾಗಿದ್ದು, ಇತರೆ ಸಿಬ್ಬಂದಿಗಳನ್ನು ಮೈಸೂರಿನ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಸಿಐಡಿ ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ವರ್ಗಾವಣೆ ಕುತೂಹಲ ಮೂಡಿಸಿದ್ದು, ಶೂಟೌಟ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. (ಕೆ.ಎಸ್,ಎಸ್.ಎಚ್)