ಮೈಸೂರು

ದಿ.24ರಂದು ವಿದುಷಿ ಕೃತಿಕಾ ಶ್ರೀನಿವಾಸನ್ ಹಾಗೂ ವಿದ್ವಾನ್ ವಿ.ಕೃಷ್ಣಪ್ರಸಾದ್ ರಿಂದ ಸಂಗೀತ ಕಛೇರಿ

ಮೈಸೂರು,ಮೇ.20 : ವಿದುಷಿ ಕೃತಿಕಾ ಶ್ರೀನಿವಾಸನ್ ಹಾಗೂ ವಿದ್ವಾನ್ ವಿ.ಕೃಷ್ಣಪ್ರಸಾದ್ ಅವರಿಂದ ಗಾನಭಾರತಿಯಲ್ಲಿ ಮೇ.24ರ ಸಂಜೆ 6 ಗಂಟೆಗೆ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಕೃತಿಕಾ ಶ್ರಿನಿವಾಸನ್ ಅವರು, ಚಿತ್ರವೀಣಾ ಎನ್.ರವಿಕಿರಣ್ ಗುರುಗಳಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ. ಜೊತೆಗೆ ವಿದ್ವಾನ್ ಅನೂರು ಅನಂತ ಕೃಷ್ಣಶೃಮ ಅವರ ಮಾರ್ಗದರ್ಶನದಲ್ಲಿ ಸಂಗೀತ ವಿದ್ವತ್ ಪದವಿ ಪಡೆದಿರುವುದು,

ಅದರಂತೆ ವಿದ್ವಾನ್ ಪ್ರಸಾದ್ ಅವರು ವಿದ್ವಾನ್ ಆರ್.ಕೆ.ಪದ್ಮನಾಭ ಅವರಲ್ಲಿ ಸಂಗೀತ ಶಿಕ್ಷಣ ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಅದರೊಂದಿಗೆ ಎನ್.ಆರ್.ಕಾಲೋನಿ ರಾಮಮಂದಿರದಂತ ಹಲವು ಸಂಘಟನೆಗಳೊಂದಿಗೆ ಸಕ್ರಿಯವಾಗಿದ್ದು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ನಾದಜ್ಯೋತಿ, ಸಂಗೀತ ವಿಶಾರದ, ಅನನ್ಯಯುವ ಪುರಸ್ಕಾರಗಳ ಲಭಿಸಿವೆ.

ಇವರುಗಳಿಗೆ ವಿದುಷಿ ಶ್ರುತಿ ಹಾಗೂ ವಿದ್ವಾನ್ ಎಂ.ಆರ್.ಮಂಜುನಾಥ್ ಇವರುಗಳು ಪಿಟೀಲು ಹಾಗೂ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: