ಕರ್ನಾಟಕ

ಕುಡಿಯುವ ನೀರಿನ ಸಮಸ್ಯೆಗೆ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ

ಹಾಸನ (ಮೇ 20): ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಈ ಹಿನ್ನೆಯಲೆಯಲ್ಲಿ ಬರಪರಿಸ್ಥಿತಿಯನ್ನು ಸಮರ್ಥವಾಗಿ ಪರಿಹರಿಸಲು ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ವ್ಯತ್ಯಯ ಉಂಟಾಗದಂತೆ ಸಮರ್ಥವಾಗಿ ನಿಭಾಯಿಸುವುದರಿಂದ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಪಂಚಾಯಿತಿಯ ಟೋಲ್ ಪ್ರೀ ದೂರವಾಣಿ ಸಂಖ್ಯೆ 18004251020 ಕ್ಕೆ ಸಂಪರ್ಕಿಸಲು ಕೋರಿದೆ.

ತಾಲ್ಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಪಟ್ಟಂತೆ ತಾಲ್ಲೂಕು ಪಂಚಾಯಿತಿಯ ದೂರವಾಣಿ ಸಂಖ್ಯೆಗಳೂ: ಆಲೂರು ಕಚೇರಿ: 08170-218229, ಅರಕಲಗೂಡು : 08175-220227, ಅರಸೀಕೆರೆ: 08174-232274, ಬೇಲೂರು: 08177-222371, ಚನ್ನರಾಯಪಟ್ಟಣ: 08176-253045, ಹಾಸನ: 08172-268359, ಹೊಳೆನರಸೀಪುರ : 08175-273237, ಸಕಲೇಶಪುರ: 08173-244008 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರಾದ ಡಾ.ಕೆ.ಎನ್.ವಿಜಯ್ ಪ್ರಕಾಶ್ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: