ಸುದ್ದಿ ಸಂಕ್ಷಿಪ್ತ
ಪರೀಕ್ಷಾ ಫಲಿತಾಂಶ ಹಾಗೂ ಅರ್ಹತಾ ಪಟ್ಟಿಯ ಪ್ರಕಟ
ಹಾಸನ (ಮೇ 18): ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಮೋರಾರ್ಜಿ ದೇಸಾಯಿ ವಸತಿ ಶಾಲೆ/ಕಿತ್ತೂರು ರಾಣಿ ಚನ್ನಮ್ಮ/ಇಂದಿರಾ ಗಾಂಧಿ/ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳಿಗೆ 2019-20ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾದ ಪರೀಕ್ಷೆಯ ಫಲಿತಾಂಶವನ್ನು ಹಾಗೂ ಅರ್ಹತಾ ಪಟ್ಟಿಯನ್ನು ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಪ್ರಕಟಿಸಲಾಗಿರುತ್ತದೆ.
ಪ್ರವರ್ಗವಾರು ಕೌನ್ಸಿಲಿಂಗ್ ನಡೆಯುವ ವೇಳಾಪಟ್ಟಿ: ಮೇ. 27 ರಂದು ವಿಶೇಷ ವರ್ಗ, ಆಶ್ರಮ ಶಾಲೆ, ಪ್ರವರ್ಗ-2ಬಿ, ಪ್ರವರ್ಗ-1, ಪರಿಶಿಷ್ಟ ಪಂಗಡ, ಮೇ. 28 ರಂದು ಪರಿಶಿಷ್ಟ ಜಾತಿ (ಬಾಲಕಿಯರು), ಮೇ.29 ರಂದು ಪರಿಶಿಷ್ಟ ಜಾತಿ (ಬಾಲಕರು), ಪ್ರವರ್ಗ-2ಎ, ಮೇ. 30. ಪ್ರವರ್ಗ-3ಎ, ಪ್ರವರ್ಗ-3ಬಿ.
ಪ್ರವರ್ಗವಾರು ರ್ಯಾಂಕಿಂಗ್ ಆಧಾರದ ಮೇಲೆ ಮೇ. 27 ರಿಂದ ಮೇ. 30 ರವರೆಗೆ ಡಾ. ಬಿ.ಆರ್ ಅಂಬೇಡ್ಕರ್ ಭವನ ರಸ್ತೆ, ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಇಲ್ಲಿ ಕೌನ್ಸಿಲಿಂಗ್ಗೆ ನಡೆಸಲಾಗುವುದು. ಸಂದರ್ಶನ ಪತ್ರಗಳನ್ನು ಅಭ್ಯರ್ಥಿಗಳಿಗೆ ಕಳುಹಿಸಲಾಗಿರುತ್ತದೆ.
ಕೌನ್ಸಿಲಿಂಗ್ಗೆ ಹಾಜರಾಗುವ ಅಭ್ಯರ್ಥಿಗಳು ಸಂಬಂಧಿಸಿದ ಸಂದರ್ಶನ ಪತ್ರ ಮೂಲಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಗವಿಕಲರ ಮತ್ತು ವಿಶೇಷ ದುರ್ಬಲ ವರ್ಗದ ಪ್ರಮಾಣ ಪತ್ರಗಳೊಂದಿಗೆ ಹಾಜರಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. (ಎನ್.ಬಿ)