ಕರ್ನಾಟಕ

ಪ್ರಾಕೃತಿ ವಿಕೋಪ ಅಗತ್ಯ ಪೂರ್ವ ತಯಾರಿ ಕುರಿತು ತರಬೇತಿ ಕಾರ್ಯಗಾರ

ಹಾಸನ (ಮೇ 20): ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಎನ್.ವಿಜಯ್ ಪ್ರಕಾಶ್ ಅವರು ಮೇ.17 ಶುಕ್ರವಾರದಂತು ಅರಸೀಕರೆ ತಾಲ್ಲೂಕಿನ ವಿವಿಧ ಸ್ಥಾನಗಳಿಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಗಳನ್ನು ಪರಿಶೀಲಿಸಿ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು.

ತಾಲ್ಲೂಕಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಪ್ರತಿದಿನ ವ್ಯವಸ್ಥಿತವಾಗಿ ಟ್ಯಾಂಕರ್’ಗಳ ಮೂಲಕ ನೀರು ಪೂರೈಕೆಯಾಗಬೇಕು. ಮುಂದೆ ಸಮಸ್ಯೆ ತಲೆದೂರಬಹುದಾದ ಗ್ರಾಮಗಳನ್ನು ಪಟ್ಟಿಮಾಡಿ ಅದಕ್ಕೆ ಅಗತ್ಯ ಪೂರ್ವ ಯೋಜನೆ ಮತ್ತು ತಯಾರು ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸೂಚನೆ ನೀಡಿದರು.

ಸಮಸ್ಯೆ ಇರುವ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಇರುವ ಸಾಧ್ಯತೆ ಮತ್ತು ಅವಕಾಶಗಳ ಬಗ್ಗೆ ಪರಿಶೀಲಿಸಿ, ಸ್ಥಳೀಯವಾಗಿ ಯಾವುದಾದರೂ ಖಾಸಗಿ ಕೊಳವೆ ಬಾವಿಗಳು ಲಭ್ಯವಿದ್ದರೆ ಅವುಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಿ ಎಂದು ಡಾ.ಕೆ.ಎನ್.ವಿಜಯ್ ಪ್ರಕಾಶ್ ಅವರು ಹೇಳಿದರು.

ಇದೇ ವೇಳೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳನಕೆರೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕವನ್ನು ವೀಕ್ಷಣೆ ಮಾಡಿದರು. ಲಾಳನ ಕೆರೆಯಲ್ಲಿ ಟ್ಯಾಂಕರ್ ಮೂಲಕ ವಿತರಣೆಯಾಗುತ್ತಿದ್ದಂತಹ ನೀರು ಸರಬರಾಜು ಮಾಡುವಿಕೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಹಾಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ರೋಗಿಗಳಿಗೆ ಉತ್ತಮವಾದ ಔಷಧೋಪಚಾರಗಳು ದೊರಕಬೇಕು ಎಂದು ತಿಳಿಸಿದರು.

ಈ ಸಂಬಂಧ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು ಮುಂದಿನ 10 ದಿನಗಳೊಳಗೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಗೊಂದಲಪಡುವಂತಿಲ್ಲ ಈ ಕುರಿತಂತೆ ತಾಲ್ಲೂಕುವಾರುಗಳಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು ಈ ಮೂಲಕ ಮಾಹಿತಿಯನ್ನು ತಿಳಿಸಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿಯ ಉಪನಿರ್ದೇಶಕರಾದ ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಡಿ.ಆರ್.ಡಿ.ಎ ಕೋಶದ ಯೋಜನಾ ನಿರ್ದೇಶಕರಾದ ಅರುಣ್‍ಕುಮಾರ್, ಅರಸೀಕೆರೆ ತಾಲ್ಲೂಕಿನ ಇ.ಓ. ಕೃಷ್ಣಮೂರ್ತಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: