ಮೈಸೂರು

ದ್ವಿಚಕ್ರವಾಹನದ ಮೇಲೆ ಬಿದ್ದ ಮರದ ಕೊಂಬೆ : ಜಖಂ

ಮೈಸೂರು,ಮೇ.20:- ಗಾಳಿ ಮಳೆ ಇಲ್ಲದೆಯೇ ಮರದ ಕೊಂಬೆಯೊಂದು ಮರದ ಕೆಳಗೆ ನಿಲ್ಲಿಸಿಟ್ಟ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಜಖಂಗೊಂಡ ಘಟನೆ ಯಾದವಗಿರಿಯಲ್ಲಿ ನಡೆದಿದೆ.

ಯಾದವಗಿರಿ ನಿವಾಸಿ ಗೋವಿಂದರಾಜ್ ಎಂಬವರು ಯಾದವಗಿರಿ ರಸ್ತೆಯಲ್ಲಿರುವ ಎಟಿಎಂ ಎದುರಿರುವ ಮರದ ಕೆಳಗೆ ದ್ವಿಚಕ್ರವಾಹನ ನಿಲ್ಲಿಸಿ ಹ ಣಡ್ರಾ ಮಾಡಲು ತೆರಳಿದ್ದರು. ಈ ಸಂದರ್ಭ ಮರದ ಕೊಂಬೆಯೊಂದು ಏಕಾಏಕಿ ಬೈಕ್  ಮೇಲೆ ಬಿದ್ದಿದೆ. ಸ್ಥಳದಲ್ಲಿದ್ದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೂಗಿಕೊಂಡಿದ್ದಾರೆ. ಕೊಂಬೆ ಬಿದ್ದ ಬಿರುಸಿಗೆ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿವಿಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಪಾಲಿಕೆಯ ಅಭಯ ತಂಡ ಸ್ಥಳಕ್ಕೆ ಆಗಮಿಸಿ ಮುರಿದು ಬಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿ ಬೈಕ್  ನ್ನು ಮಾಲೀಕರಿಗೊಪ್ಪಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: