ಮೈಸೂರು

ಅಭಿವೃದ್ಧಿ ಪರ ಚಿಂತನೆ ಅವಶ್ಯ ಮಹಮ್ಮದ್ ಅಜೀಬುದ್ದೀನ್ ಕರೆ

ಅಭಿವೃದ್ಧಿ ಪರ ಚಿಂತನೆ ನಡೆಸಿದಾಗ ಮಾತ್ರ ಏಳ್ಗೆ ಸಾಧ್ಯ ಅಂತಹ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇದ್ದು ಮುನ್ನಡಿಯಿಡಬೇಕೆಂದು ಅಖಿಲ ಭಾರತೀಯ ಜೀವವಿಮಾ ಪ್ರಾಂತೀಯ ವ್ಯವಸ್ಥಾಪಕ ಮಹಮ್ಮದ್ ಅಜೀಬುದ್ದೀನ್ ಆಶಿಸಿದರು.

ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಸೋಮವಾರ ಕಲಾಮಂದಿರಲ್ಲಿ ‘ಪ್ರತಿನಿಧಿಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ ಹಿಂದೆ ಒಂದು ತಿಂಗಳಿಗೆ 100 ಕೋಟಿ ಜೀವವಿಮೆ ಮಾಡಿಸಬೇಕೆನ್ನುವುದು ಅಸಾಧ‍್ಯ ಹಾಗೂ ಹಾಸ್ಯಾಸ್ಪದವಾಗಿತ್ತು. ಆದರೀಗ ಕ್ಷೇತ್ರವೂ ಬದಲಾಗಿದೆ, ಇತ್ತೀಚಿನ ವರ್ಷಗಳಲ್ಲಿ ಪ್ರತಿ ತಿಂಗಳು 400 ರಿಂದ 500 ಕೋಟಿ ರೂಪಾಯಿ ಜೀವವಿಮೆ ಮಾಡಿಸಲಾಗುತ್ತಿದೆ, 17ನೇ ಸ್ಥಾನದಲ್ಲಿದ್ದ ಬೆಂಗಳೂರು-1 ಪ್ರಸಕ್ತ ಸಾಲಿನಲ್ಲಿ ವಿಶಾಖಪಟ್ಟಣ ಮತ್ತು ಸಿಕಂದ್ರಬಾದ್‍ ಅನ್ನು ಹಿಮ್ಮೆಟ್ಟಿಸಿ ದಕ್ಷಿಣ ಮಧ್ಯವಲಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು ಸಾಧನೆಗೈದ ಪ್ರತಿನಿಧಿಗಳ ಕಾರ್ಯ ಶ‍್ಲಾಘನೀಯವೆಂದರು. ಕಳೆದ ಸಾಲಿನ ಡಿಸೆಂಬರ್‍ ತಿಂಗಳಿನಲ್ಲಿ ಬೆಂಗಳೂರು I -190 (ಕೋ.ರೂ) ಬೆಂಗಳೂರು II- 198 (ಕೋರೂ) ಹಾಗೂ ಉಡುಪಿ  78 ಕೋಟಿ ರೂಪಾಯಿಗಳ ವಿಮೆ ಮಾಡಿಸಿ ಪ್ರತಿನಿಧಿಗಳು ಉತ್ತಮ ಸಾಧನೆ ಮೆರೆದಿದ್ದು ಪ್ರಸ್ತಕ ಸಾಲಿನ ಮಾರ್ಚ್‍ನಲ್ಲಿ ನಡೆಯುವ ವಾರ್ಷಿಕ ವರದಿಯಲ್ಲಿ ಮೈಸೂರು ನಂ1 ಸ್ಥಾನಕ್ಕೇರಲು ಪ್ರತಿನಿಧಿಗಳು ಶ್ರಮಿಸಿಬೇಕೆಂದರು. ವಿಭಾಗದ 12 ಜನ ಏಜೆಂಟರ್‍ 1 ಕೋಟಿಯ ಗುರಿ ತಲುಪಿದ್ದು, ದಕ್ಷಿಣಮಧ್ಯವಲಯವೂ ಶೇ.94ರಷ್ಟು ಗುರಿ ತಲುಪಿ ಅತ್ಯುತ್ತಮ ಸಾಧನೆಗೈದಿದೆ ಎಂದು ಶ‍್ಲಾಘಿಸಿದರು.

ನೋಟು ಅಮಾನ್ಯದಿಂದ ದೇಶದ ಬ್ಯಾಂಕಿಗಳಿಗೆ 58ಸಾವಿರ ಕೋಟಿ ರೂಪಾಯಿ ಠೇವಣಿಗಳು ಕ್ರೋಢೀಕರಣಗೊಂಡಿದ್ದು ದೇಶದ ಸಮಗ್ರಾಭಿವೃದ್ಧಿ ನಿರೀಕ್ಷಿಸಬಹುದು, ಅಷ್ಟೊಂದು ಬೃಹತ್‍ ಮೊತ್ತವು ಎಲ್ಲಿತ್ತು ಎನ್ನುವುದೇ ಯಕ್ಷಪ್ರಶ್ನೆಯಾಗಿದ್ದು ಆ ಹಣವನ್ನು ಉದ್ಯಮದಲ್ಲಿ ತೊಡಗಿಸಲು ಸಾಧ್ಯವಿಲ್ಲವೆನ್ನುವುದೇ ದುರದೃಷ್ಟಕರವಾಗಿದೆ.  ಕೌಟುಂಬಿಕ ಹಾಗೂ ವೃತ್ತಿ ಬದುಕಿನ ಯಶಸ್ಸಿಗೆ ಪಂಚಸೂತ್ರಗಳನ್ನು ಆಳವಡಿಸಿಕೊಳ್ಳಿ ಎಂದು ತಿಳಿಸಿದರು.

ಮೈಸೂರು ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಅನಂತಪದ್ಮನಾಭ ಕೆ. ಅಧ್ಯಕ್ಷ ವಿ.ಜಿ.ಅಶೋಕ, ,ಮಾರುಕಟ್ಟೆ ವ್ಯವಸ್ಥಾಪಕ ಜೂಲಿಯನ್ ಡಿಸೋಜಾ, ಅಖಿಲ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಶ್ರೀನಿವಾಸಚಾರಿ, ದಕ್ಷಿಣ ಮಧ್ಯವಲಯ ಅಧ್ಯಕ್ಷ ಸಿಂಗಾರಪ್ಪ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಡಿ.ರಾಮಚಂದ್ರ, ಜಿ.ಚಂದ್ರಶೇಖರ್, ಎಂ.ಸಿ.ಸುಂದರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಸಿಒಟಿ ಹಾಗೂ ಟಿಒಟಿ ತರಬೇತಿದಾರ ಬಿ.ಪಿ.ವಿಜಯ್ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್‍ ಹಿರಿಯ ವ್ಯವಸ್ಥಾಪಕ ಎಸ್.ಪ್ರಸನ್ನಕುಮಾರ್ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: