ಸುದ್ದಿ ಸಂಕ್ಷಿಪ್ತ

ಬಸವೇಶ್ವರ ಅನಾಥಾಲಯಕ್ಕೆ ಅರ್ಜಿ ಆಹ್ವಾನ

ಮೈಸೂರು,ಮೇ.21 : ಜೆಎಸ್ಎಸ್ ಮಹಾವಿದ್ಯಾಪೀಠದಿಂದ  ಗುಂಡ್ಲುಪೇಟೆ ತಾಲ್ಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆಸುತ್ತಿರುವ ಬಸವೇಶ್ವರ ಅನಾಥಾಲಯಕ್ಕೆ ಪ್ರಸ್ತಕ ಶೈಕ್ಷಣಿಕ ಸಾಲಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೇರಲು ಬಯಸುವ ವಿದ್ಯಾರ್ಥಿಗಳು 5 ರಿಂದ 10 ತರಗತಿವರೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡಿರಬೇಕು, ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ನೀಡಲಾಗುವುದು. ಅರ್ಜಿಗಳನ್ನು ಸಂಬಂಧಿಸಿದ ಅನಾಥಾಲಯದಲ್ಲಿ ಪಡೆದು ಮೇ.25ರೊಳಗೆ ಮರಳಿಸಬೇಕೆಂದು ತಿಳಿಸಲಾಗಿದೆ. ವಿವರಗಳಿಗೆ ಮೊ.ಸಂ. 9901798042 ಅನ್ನು ಸಂಪರ್ಕಿಸಬಹುದೆಂದು ಕಾರ್ಯದರ್ಶಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: