ಮೈಸೂರು

ದಿ. ರಾಜೀವ್‌ಗಾಂಧಿ ಅವರ 28ನೇ ಪುಣ್ಯಸ್ಮರಣೆ ಅಂಗವಾಗಿ ಹಣ್ಣು ಹಂಪಲು ವಿತರಣೆ

ಮೈಸೂರು,ಮೇ.22:- ಮೈಸೂರು ನಗರ ( ಜಿಲ್ಲಾ ) ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್‌ಗಾಂಧಿ ಅವರ 28ನೇ ಪುಣ್ಯಸ್ಮರಣೆ ಅಂಗವಾಗಿ ಕೃಷ್ಣರಾಜ ಆಯುರ್ವೇದಿಕ್ ಆಸ್ಪತ್ರೆಯ ರೋಗಿಗಳಿಗೆ   ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಮೆಯರ್ ಪುಷ್ಪಲತಾ ಜಗನ್ನಾಥ್ , ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಅವರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮ‌ೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಡಾ. ಎಂ.ಕೆ.ಅಶೋಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುಷ್ಪವಲ್ಲಿ, ಮೈಸೂರು ಬಸವಣ್ಣ, ತಿಲಕ್ ನಗರ ನಾಗರಾಜು, ಹರೀಶ್ ಗೌಡ, ನಾಗರಾಜು,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: