ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಕೇಂದ್ರ: ಠೇವಣಿ ಕಳೆದುಕೊಳ್ಳುವ ಮುನ್ಸೂಚನೆ ನೀಡಿದ ಪ್ರಕಾಶ್ ರೈ

ಬೆಂಗಳೂರು,ಮೇ 23- ದೇಶದ ಕಾಸ್ಮೋಪಾಲಿಟಿನ್‌ ಕ್ಷೇತ್ರಗಳ ಪೈಕಿ ಒಂದಾದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟ ಪ್ರಕಾಶ್ ರೈ 10168 ಮತಗಳನ್ನು ಪಡೆದಿದ್ದು ಠೇವಣಿ ಕಳೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಹಾಗೂ ಬಿಜೆಪಿಯ ಪಿ.ಸಿ.ಮೋಹನ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ರಿಜ್ವಾನ್ ಮುನ್ನಡೆ ಸಾಧಿಸಿದ್ದಾರೆ. ರಿಜ್ವಾನ್ 227018ಮತಗಳು ಹಾಗೂ ಪಿಸಿ ಮೋಹನ್ 201959 ಮತಗಗಳನ್ನು ಗಳಿಸಿದ್ದಾರೆ.

ಹಾಲಿ ಸಂಸದ ಪಿ.ಸಿ. ಮೋಹನ್‌ 3ನೇ ಬಾರಿಗೆ ಆರಿಸಿ ಬರುವ ತವಕದಲ್ಲಿದ್ದು, ಪ್ರಕಾಶ್‌ ರೈ ಸ್ಪರ್ಧೆಯಿಂದ ಬಿಜೆಪಿಗೆ ವರದಾನವಾಗಲಿದೆ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಒಂದೆಡೆ ತಮಗೆ ಬೆಂಬಲ ನೀಡುವಂತೆ ಸ್ವತಃ ಪ್ರಕಾಶ್‌ ರೈ ಅವರೇ ಕಾಂಗ್ರೆಸ್‌ನ ಹಿಂದೆ ಬಿದ್ದಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೀಗ ಕಾಂಗ್ರೆಸ್‌ ಪಾಲಿಗೆ ಪ್ರಕಾಶ್‌ ರೈ ಸ್ಪರ್ಧೆಯೇ ಕಗ್ಗಂಟಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಸೃಷ್ಟಿಯಾಗಿತ್ತು. ನಂತರ ನಡೆದ ಎರಡು ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು. ನೂತನ ಕ್ಷೇತ್ರದ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌. ಟಿ. ಸಾಂಗ್ಲಿಯಾನಾ ವಿರುದ್ಧ ಪಿ.ಸಿ. ಮೋಹನ್‌ ಬಿಜೆಪಿಯಿಂದ ಆರಿಸಿ ಬಂದಿದ್ದರು. 2014ರಲ್ಲೂ ಜಯದ ಅಭಿಯಾನ ಮುಂದುವರಿಸಿದ್ದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ರಾಜಾಜಿನಗರ, ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸರ್ವಜ್ಞನಗರ, ಸಿವಿ ರಾಮನ್‌ ನಗರ, ಮಹಾದೇವಪುರ ಮತ್ತುಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಿವೆ. (ಎಂ.ಎನ್)

Leave a Reply

comments

Related Articles

error: