
ಮೈಸೂರು
ಮೊಮ್ಮಗನ ಸ್ನೇಹಿತನಿಂದಲೇ ಸರ ಕಳುವು : ಅನುಮಾನ ವ್ಯಕ್ತಪಡಿಸಿ ದೂರು
ಮೈಸೂರು,ಮೇ.23:- ಮನೆಯ ಕೋಣೆಯ ಬೀರುವಿನಲ್ಲಿರಿಸಿದ್ದ 28ಗ್ರಾಂನ ಚಿನ್ನದ ಸರವನ್ನು ಪರಿಚಿತ ಯುವಕನೋರ್ವ ಕಳುವು ಮಾಡಿರುವ ಕುರಿತು ಅನುಮಾನ ವ್ಯಕ್ತಪಡಿಸಿ ಮಹಿಳೇಯೋರ್ವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಬ್ಬಾಳ ನಿವಾಸಿ ರತ್ನಮ್ಮ ಎಂಬವರೇ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದವರಾಗಿದ್ದು, ಮೊಮ್ಮಗ ಶರತ್ ಸ್ನೇಹಿತ ನಿತಿನ್ ವಿರುದ್ಧ ಸರಗಳ್ಳತನದ ಅನುಮಾನ ವ್ಯಕ್ತಪಡಿಸಿದ್ದಾರೆ. ಇವರು 2019ರ ಮೇ 21ರಂದು ಆರೋಗ್ಯ ತಪಾಸಣೆಗೆಂದು ತೆರಳಿದ ವೇಳೆ ಇವರ ಮೊಮ್ಮಗ ಶರತ್ ನನ್ನು ಕೇಳಿಕೊಂಡು ನಿತಿನ್ ಮನೆಗೆ ಬಂದಿದ್ದ. ಆತ ಇಲ್ಲ ಮತ್ತೆ ಬಾ ಎಂದರೂ ಕೂಡ ತುರ್ತಾಗಿ ಮಾತನಾಡುವುದಿದೆ. ನೀವು ಆಸ್ಪತ್ರೆಗೆ ಹೋಗಿ ಬನ್ನಿ ಅಲ್ಲಿಯವರೆಗೆ ಮನೆಯಲ್ಲಿಯೇ ಇರುತ್ತೇನೆ. ಆತ ಬಂದ ನಂತರ ಮಾತನಾಡುತ್ತೇನೆ ಎಂದು ಬಲವಾಗಿ ಒಪ್ಪಿಸಿದ್ದಾನೆ. ಒಲ್ಲದ ಮನಸ್ಸಿನಿಂದಲೇ ಈತನ ಮಾತನ್ನು ನಂಬಿ ಆಸ್ಪತ್ರೆಗೆ ತೆರಳಿದ್ದೆ. ಪುನಃ ಮನೆಗೆ ಬಂದಾಗ ನಿತಿನ್ ನನನ್ನ್ನು ನೋಡಿ ಗಾಬರಿಯಿಂದ ಆತುರಾತುರವಾಗಿ ಮನೆಯಿಂದ ತೆರಳಿದ. ಅನುಮಾನ ಬಂದು ಬೀರುವನ್ನು ತೆರೆದು ನೋಡಿದಾಗ 28ಗ್ರಾಂ ತೂಕದ ಚಿನ್ನದ ಸರ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಸರವನ್ನು ಆತನೇ ಕಳುವು ಮಾಡಿರಬಹುದು. ವಿಚಾರಣೆ ನಡೆಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)