ಮೈಸೂರು

ಜ್ಞಾನಯೋಗ ಮತ್ತು ಮೈಂಡ್ ಮಾಸ್ಟರ್ ತರಬೇತಿ

ಮೈಸೂರು, ಮೇ 23:- ಜ್ಞಾನಯೋಗ ಫೌಂಡೇಷನ್ ವತಿಯಿಂದ ಮೈಸೂರು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಹಾರ್ಡ್‍ವೀಕ್ ಶಾಲೆಯ ಆವರಣದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಜ್ಞಾನಯೋಗ ಮತ್ತು ಮೈಂಡ್ ಮಾಸ್ಟರ್ ತರಬೇತಿಯನ್ನು ಆಯೋಜಿಸಲಾಗಿದೆ.

ತರಬೇತಿಯಲ್ಲಿ ಮಕ್ಕಳಿಗಾಗಿ ವಿಶೇಷ ಜ್ಞಾಪಕಶಕ್ತಿ, ಏಕಾಗ್ರತೆ, ಹೆಚ್ಚಿನ ಬುದ್ಧಿಶಕ್ತಿ, ಆತ್ಮವಿಶ್ವಾಸ ಮತ್ತು ಧೈರ್ಯ ವೃದ್ಧಿ ಮಾಡುವ ಕೌಶಲ್ಯಗಳನ್ನು ಕಲಿಕೆಯ ಸಮಯದಲ್ಲಿ ಮಕ್ಕಳಿಗೆ ಹೇಳಿಕೊಡಲಾಗುವುದು. ಈ ತರಬೇತಿಯಿಂದ ಮೊಬೈಲ್ ಹಾಗೂ ದೃಶ್ಯ ಮಾಧ್ಯಮಗಳ ಮುಂದೆ ಹೆಚ್ಚಿನ ಬಳಕೆ ಮಾಡದಿರುವುದು, ಕೋಪ ಮತ್ತು ಬೇಕರಿಯ ತಿನಿಸುಗಳನ್ನು ಕಡಿಮೆ ಮಾಡುವುದು, ಕೆಟ್ಟ ಹವ್ಯಾಸಗಳಿಂದದೂರವಾಗುವುದು ಹಾಗೂ ಶಿಸ್ತನ್ನು ರೂಢಿಸಿಕೊಳ್ಳುವುದು ಕೌಶಲ್ಯದಲ್ಲಿ ಕಾಣಬಹುದು.

ವಿಶೇಷವಾಗಿ ತರಬೇತಿಯಲ್ಲಿ ಕಣ್ಣು ಮುಚ್ಚಿಕೊಂಡು ಓದುವುದು, ಬರೆಯುವುದು, ಚಿತ್ರ ಬಿಡಿಸುವುದು, ಬಣ್ಣವನ್ನು ಗುರುತಿಸುವುದು, ವಿವಿಧ ವೈವಿಧ್ಯಮಯ ಕೌಶಲ್ಯಗಳನ್ನು ಶಿಬಿರದಲ್ಲಿ ಚಟುವಟಿಕೆಗಳ ಮೂಲಕ ತೋರಿಸಿಕೊಡಲಾಗುವುದು. ವಯೋಮಿತಿ 5ರಿಂದ 18 ವರ್ಷ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜ್ಞಾನಯೋಗ ಫೌಂಡೇಷನ್‍ನ ಮುಖ್ಯಸ್ಥರಾದ ಎಸ್.ಎಸ್.ಚಂದ್ರಕಾಂತ, ಮೊಬೈಲ್ 9108430999, 9108431999 ಹಾಗೂ 9060636127 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: