ಕರ್ನಾಟಕಮೈಸೂರು

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಹಿನ್ನಡೆ

ಬೆಂಗಳೂರು (ಮೇ 23): ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ. ದೇವೇಗೌಡ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದಾರೆ. ಮೈತ್ರಿ ಅಭ್ಯರ್ಥಿ ವಿರುದ್ಧ ಬಿಜೆಪಿಯಿಂದ ಜಿ.ಎಸ್. ಬಸವರಾಜು ಸ್ಪರ್ಧಿಸಿದ್ದು, ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಜಿ.ಎಸ್. ಬಸವರಾಜ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರಿಗೆ 18, 310 ಮತಗಳ ಹಿನ್ನಡೆ ಆಗಿದೆ. ಎಚ್ ಡಿ ದೇವೇಗೌಡ 23, 1223 ಮತ ಪಡೆದರೆ ಬಸವರಾಜು 249533 ಮತ ಪಡೆದಿದ್ದಾರೆ.

ದೊಡ್ಡ ಗೌಡರ ಪಾಲಿಗೆ ಮೂಲತಃ ಹಾಸನ ತವರು ಕ್ಷೇತ್ರ. ಕಳೆದ ಮೂರು ದಶಕಗಳಿಂದ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ದೇವೇಗೌಡ ಸಾಮಾನ್ಯವಾಗಿ ಎಲ್ಲಾ ಚುನಾವಣೆಯಲ್ಲೂ ಕನಿಷ್ಟ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಮೊಮ್ಮಗ ಪ್ರಜ್ವಲ್​ ರೇವಣ್ಣಗೆ ತಮ್ಮ ಕ್ಷೇತ್ರ ಹಾಸನವನ್ನು ಬಿಟ್ಟುಕೊಟ್ಟ ನಂತರ ತುಮಕೂರಿನಲ್ಲಿ ದೇವೇಗೌಡ ಚುನಾವಣೆ ಎದುರಿಸಿದ್ದರು. (ಎನ್.ಬಿ)

Leave a Reply

comments

Related Articles

error: