ಪ್ರಮುಖ ಸುದ್ದಿ

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಲಿದ್ದಾರಂತೆ ಚಂದ್ರ ಬಾಬು ನಾಯ್ಡು : 30ಕ್ಕೆ ಜಗನ್ ಮೋಹನ್ ಪ್ರಮಾಣ ವಚನ ಸಾಧ್ಯತೆ

ದೇಶ(ಹೈದ್ರಾಬಾದ್)ಮೇ.23:-  ಇಂದು ಲೋಕಸಭಾ ಚುನಾವಣೆಯ ಜೊತೆಜೊತೆಗೆ ಆಂದ್ರಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯೂ ನಡೆದಿದ್ದು, ತೆಲಗು ದೇಶಂ ಪಾರ್ಟಿ ಸೋಲನುಭವಿಸಿದ್ದು, ಟಿಡಿಪಿ ಅಧ್ಯಕ್ಷ, ರಾಜ್ಯದ ಮುಖ್ಯಮಂತ್ರಿ  ಚಂದ್ರಬಾಬು ನಾಯ್ಡು ಇಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿಯವರ ವೈಎಸ್ ಆರ್ ಅಧಿಕಾರಕ್ಕೆ ಬರಲಿದ್ದು, ಜಗನ್ ಮೋಹನ್ ರೆಡ್ಡಿ ಮೇ.25ರಂದು ಶಾಸಕರ ಸಭೆ ಕರೆದಿದ್ದು, ಮೇ.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. 175ವಿಧಾನಸಭಾ ಕ್ಷೇತ್ರಗಳಲ್ಲಿ ವೈಎಸ್ ಆರ್ ಕಾಂಗ್ರೆಸ್ 149 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಟಿಡಿಪಿ 25 ಸ್ಥಾನಗಳಲ್ಲಿ ಮುಂದಿದೆ. ಒಂದು ಕ್ಷೇತ್ರದಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: